alex Certify ಇಲ್ಲಿದೆ ನೋಡಿ ವಿಶ್ವದ ಅತಿ ಚಿಕ್ಕ ಗೋಸುಂಬೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ನೋಡಿ ವಿಶ್ವದ ಅತಿ ಚಿಕ್ಕ ಗೋಸುಂಬೆ…!

ಸರಿಸೃಪ ಪ್ರಬೇಧಗಳು ಭೂಮಿಯ ಮೇಲಿನ ಆಕರ್ಷಕ ಜೀವಿಗಳಲ್ಲೊಂದು. ಪರಭಕ್ಷಕ ಜೀವಿಗಳಾದ ಸರೀಸೃಪಗಳು ಪರಿಸರ ವ್ಯವಸ್ಥೆ ಹಾಗೂ ಆಹಾರ ಜಾಲದಲ್ಲಿ ಬಹುಮುಖ್ಯ ಪಾತ್ರವನ್ನ ವಹಿಸುತ್ತವೆ.

ಸರಿಸೃಪ ಪ್ರಬೇಧ ವಿವಿಧ ಆಕಾರ ಹಾಗೂ ಗಾತ್ರದ ಜೀವಿಗಳನ್ನ ಹೊಂದಿದೆ. ಆದರೆ ಎಂದಾದರೂ ವಿಶ್ವದ ಅತಿ ಚಿಕ್ಕ ಸರಿಸೃಪ ಯಾವುದು ಅನ್ನೋದರ ಬಗ್ಗೆ ಅಧ್ಯಯನ ಮಾಡಿದ್ದೀರಾ..?

ಮಡ್​ಗಾಸ್ಕರ್​ನ ವಿಜ್ಞಾನಿಗಳ ತಂಡ ವಿಶ್ವದ ಅತ್ಯಂತ ಚಿಕ್ಕ ಗೋಸುಂಬೆಯನ್ನ ಪತ್ತೆ ಹಚ್ಚಿದೆ. ಇದು ವಿಶ್ವದ ಅತೀ ಚಿಕ್ಕ ಸರೀಸೃಪ ಎನ್ನಲಾಗಿದೆ.

ಈ ಗೋಸುಂಬೆಗಳು ಎಷ್ಟು ಚಿಕ್ಕದಾಗಿದೆ ಅಂದರೆ ನಿಮ್ಮ ಬೆರಳಿನ ತುತ್ತ ತುದಿಯಲ್ಲಿ ಇವುಗಳನ್ನ ಕೂರಿಸಿಕೊಳ್ಳಬಹುದಾಗಿದೆ. ವಿಜ್ಞಾನಿಗಳು ಪುಟಾಣಿ ಗಂಡು ಹಾಗೂ ಹೆಣ್ಣು ಗೋಸುಂಬೆಗಳನ್ನ ಪತ್ತೆ ಹಚ್ಚಿದ್ದು ಹೆಚ್ಚಿನ ಅಧ್ಯಯನ ನಡೆಸುತ್ತಿದ್ದಾರೆ.

ಹೆಣ್ಣು ಗೋಸುಂಬೆ ತಲೆಯಿಂದ ಬಾಲದವರೆಗೆ 29 ಮಿಲಿಮೀಟರ್​ ಉದ್ದ ಹಾಗೂ ಬರೀ ದೇಹವೊಂದೇ 19 ಮಿಲಿ ಮೀಟರ್​ ಉದ್ದವಿದೆ. ಇನ್ನು ಗಂಡು ಗೋಸುಂಬೆ ತಲೆಯಿಂದ ಬಾಲದವರೆಗೆ 22 ಮಿಲಿಮೀಟರ್​ ಉದ್ಧ ಹಾಗೂ ದೇಹ 13.5 ಮಿಲಿಮೀಟರ್​ ಹೊಂದಿದೆ.

078/100 Marathon FB international team, led by the Bavarian State Collection of Zoology (ZSM-SNSB), has discovered a…

Posted by Energy_physicstoday on Tuesday, February 2, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...