alex Certify ಬೆಂಗಳೂರಿಗೆ ಮತ್ತೆ ಬಿಗ್ ಶಾಕ್: ಇವತ್ತೂ ಕೊರೋನಾ ಶತಕ, ಇಲ್ಲಿದೆ ವಿವಿಧ ಜಿಲ್ಲೆಗಳ ಸೋಂಕಿತರ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಂಗಳೂರಿಗೆ ಮತ್ತೆ ಬಿಗ್ ಶಾಕ್: ಇವತ್ತೂ ಕೊರೋನಾ ಶತಕ, ಇಲ್ಲಿದೆ ವಿವಿಧ ಜಿಲ್ಲೆಗಳ ಸೋಂಕಿತರ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಇವತ್ತು ಒಂದೇ ದಿನ 322 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು ಇಂದು 8 ಮಂದಿ ಕೊರೊನಾ ಸೋಂಕಿತರು ಮೃತಪಟ್ಟಿದ್ದಾರೆ. 120 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರು ನಗರ ಜಿಲ್ಲೆಯಲ್ಲಿ ಇಂದೂ ಕೊರೋನಾ ಶತಕ ಬಾರಿಸಿದೆ. ಇಂದು 107 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಜೂನ್ 19 ರಂದು 138, ಜೂನ್ 20 ರಂದು 94, ಜೂನ್ 21 ರಂದು 196, ಜೂನ್ 22 ರಂದು 126, ಜೂನ್ 23 ರ ಇಂದು 107  ಮಂದಿಗೆ ಸೋಂಕು ತಗುಲಿದೆ. ಬೆಂಗಳೂರಿನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1505 ಕ್ಕೆ ಏರಿಕೆಯಾಗಿದೆ. 435 ಮಂದಿ ಬಿಡುಗಡೆಯಾಗಿದ್ದು 996 ಸಕ್ರಿಯ ಪ್ರಕರಣಗಳಿವೆ. ಇದುವರೆಗೆ 73 ಮಂದಿ ಸಾವನ್ನಪ್ಪಿದ್ದಾರೆ.

ಇಂದು ಬಳ್ಳಾರಿ ಜಿಲ್ಲೆಯಲ್ಲಿ 53, ಬೀದರ್ 22, ಮೈಸೂರು 21, ವಿಜಯಪುರ 16, ಯಾದಗಿರಿ 13, ಉಡುಪಿ 11, ಗದಗ 9, ದಕ್ಷಿಣಕನ್ನಡ, ಕೋಲಾರ ತಲಾ 8, ಹಾಸನ 7, ಕಲಬುರಗಿ 6, ಚಿಕ್ಕಬಳ್ಳಾಪುರ, ಶಿವಮೊಗ್ಗ ತಲಾ 5 ಮಂದಿಗೆ ಸೋಂಕು ತಗುಲಿದೆ.

ಧಾರವಾಡ, ತುಮಕೂರು, ಕೊಪ್ಪಳ, ಚಾಮರಾಜನಗರ ತಲಾ 4, ರಾಯಚೂರು, ಉತ್ತರಕನ್ನಡ ತಲಾ 3, ಬೆಳಗಾವಿ, ಮಂಡ್ಯ, ದಾವಣಗೆರೆ, ಹಾವೇರಿ ತಲಾ 2, ಕೊಡಗು ಜಿಲ್ಲೆಯಲ್ಲಿ ಒಬ್ಬರಿಗೆ ಸೋಂಕು ತಗುಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...