alex Certify ಸೋಂಕಿನಿಂದ ಪ್ರತಿವರ್ಷ ಸಂಭವಿಸುತ್ತಿದೆ ಲಕ್ಷ ಲಕ್ಷ ಜನರ ಸಾವು; ಈ ವಿಧಾನದಿಂದ ಉಳಿಸಬಹುದು ಜನರ ಪ್ರಾಣ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೋಂಕಿನಿಂದ ಪ್ರತಿವರ್ಷ ಸಂಭವಿಸುತ್ತಿದೆ ಲಕ್ಷ ಲಕ್ಷ ಜನರ ಸಾವು; ಈ ವಿಧಾನದಿಂದ ಉಳಿಸಬಹುದು ಜನರ ಪ್ರಾಣ….!

ಸ್ವಚ್ಛತೆ ಕೊರತೆಯಿಂದ ಜಗತ್ತಿನಲ್ಲಿ ಸುಮಾರು 7.5 ಲಕ್ಷ ಜನರು ಪ್ರತಿವರ್ಷ ಸಾಯುತ್ತಿದ್ದಾರೆ. ಕಡಿಮೆ ಮತ್ತು ಮಧ್ಯಮ-ಆದಾಯದ ದೇಶಗಳಲ್ಲಿ ಸಂಭವಿಸುತ್ತಿರುವ ಸಾವುಗಳಿವು. ಸೋಂಕು ತಡೆಗಟ್ಟಿದರೆ ಎಂಟಿಮೈಕ್ರೊಬಿಯಲ್ ರೆಸಿಸ್ಟೆನ್ಸ್ (AMR) ನಿಂದ ಸಾಯುತ್ತಿರುವವರನ್ನು ರಕ್ಷಿಸಬಹುದು.

ಇದರಲ್ಲಿ ಮುಖ್ಯವಾಗಿ ಕೈಗಳ ನೈರ್ಮಲ್ಯ, ಆಸ್ಪತ್ರೆಗಳು ಮತ್ತು ಆರೋಗ್ಯ ಕೇಂದ್ರಗಳಲ್ಲಿನ ಉಪಕರಣಗಳ ನಿಯಮಿತ ಶುಚಿಗೊಳಿಸುವಿಕೆ, ಶುದ್ಧ ಕುಡಿಯುವ ನೀರನ್ನು ಒದಗಿಸುವುದು, ಸರಿಯಾದ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಮತ್ತು ಸರಿಯಾದ ಸಮಯದಲ್ಲಿ ಮಕ್ಕಳಿಗೆ ಲಸಿಕೆ ಹಾಕುವುದು ಸೇರಿವೆ.

ಸೋಂಕಿನಿಂದಾಗಿ ಸಂಭವಿಸುತ್ತಿದೆ ಸಾವು!

ಪ್ರತಿ ವರ್ಷ ವಿಶ್ವದಾದ್ಯಂತ ಸಂಭವಿಸುತ್ತಿರುವ ಪ್ರತಿ ಎಂಟು ಸಾವುಗಳಲ್ಲಿ ಒಂದು ಬ್ಯಾಕ್ಟೀರಿಯಾದ ಸೋಂಕುಗಳಿಂದಾಗುತ್ತಿದೆ. ಸಂಶೋಧಕರ ಪ್ರಕಾರ ಒಟ್ಟು 77 ಲಕ್ಷ ಸಾವಿನ ಪ್ರಕರಣಗಳಲ್ಲಿ 50 ಲಕ್ಷ ಬ್ಯಾಕ್ಟೀರಿಯಾಗಳಿಗೆ ಸಂಬಂಧಿಸಿದೆ. ಈ ಬ್ಯಾಕ್ಟೀರಿಯಾಗಳು ಪ್ರತಿಜೀವಕಗಳಿಗೆ ನಿರೋಧಕವಾಗಿರುತ್ತವೆ. ಹಾಗಾಗಿ ಔಷಧವು ವ್ಯಕ್ತಿಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

ಹಾಗಾಗಿ ಪ್ರಪಂಚದಾದ್ಯಂತ ರೋಗಿಗಳಿಗೆ ಪರಿಣಾಮಕಾರಿ ಪ್ರತಿಜೀವಕಗಳನ್ನು ಒದಗಿಸಬೇಕೆಂಬುದು ವಿಜ್ಞಾನಿಗಳ ಸಲಹೆ. ಇವುಗಳ ಕೊರತೆಯಿಂದಾಗಿ ಮಕ್ಕಳ ರಕ್ಷಣೆ ಸಾಧ್ಯವಾಗುತ್ತಿಲ್ಲ. ದೀರ್ಘಕಾಲೀನ ಅನಾರೋಗ್ಯಕ್ಕೂ ಪರಿಹಾರ ಸಿಗುತ್ತಿಲ್ಲ.

ಪ್ರತಿಜೀವಕಗಳ ಪ್ರಯೋಜನಗಳು

ಪರಿಣಾಮಕಾರಿ ಪ್ರತಿಜೀವಕಗಳು ರೋಗದ ಅಪಾಯವನ್ನು ಕಡಿಮೆ ಮಾಡುತ್ತವೆ. ಆರೋಗ್ಯ ವೆಚ್ಚವನ್ನು ಮಿತಿಗೊಳಿಸುತ್ತವೆ ಮತ್ತು ಶಸ್ತ್ರಚಿಕಿತ್ಸೆಯನ್ನು ಸುಲಭಗೊಳಿಸುತ್ತವೆ.

ಪ್ರತಿಜೀವಕಗಳು ಮಾತ್ರವಲ್ಲದೆ ಸೋಂಕು ನಿಯಂತ್ರಣ ಕೂಡ ಅವಶ್ಯಕ. ಸ್ವಚ್ಛತೆ ಕಾಪಾಡಿಕೊಂಡಲ್ಲಿ ಸಾವುಗಳನ್ನ ತಪ್ಪಿಸಬಹುದು. ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವುದು ಮತ್ತು ಶೌಚಾಲಯಗಳಂತಹ ಸಾರ್ವಜನಿಕ ಸೌಲಭ್ಯಗಳಲ್ಲಿ ಶುಚಿತ್ವವನ್ನು ಕಾಪಾಡುವುದು ಕೂಡ ಅವಶ್ಯಕ. ಇದರೊಂದಿಗೆ ಮಕ್ಕಳಿಗೆ ನ್ಯುಮೊಕೊಕಲ್‌ನಂತಹ ಲಸಿಕೆ ಹಾಗೂ ಗರ್ಭಿಣಿಯರಿಗೆ ಆರ್ ಎಸ್ ವಿಯಂತಹ ಲಸಿಕೆಗಳನ್ನು ನೀಡುವ ಮೂಲಕ ಸುಮಾರು 1.82 ಲಕ್ಷ ಜನರ ಜೀವ ಉಳಿಸಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...