alex Certify ಸ್ನೇಹಿತನ ಪತ್ನಿಯೊಂದಿಗೆ ಸರಸ, ಅಕ್ರಮ ಸಂಬಂಧ ಗೊತ್ತಾಗಿ ಗೆಳೆಯನಿಂದಲೇ ಘೋರ ಕೃತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ನೇಹಿತನ ಪತ್ನಿಯೊಂದಿಗೆ ಸರಸ, ಅಕ್ರಮ ಸಂಬಂಧ ಗೊತ್ತಾಗಿ ಗೆಳೆಯನಿಂದಲೇ ಘೋರ ಕೃತ್ಯ

ಬೆಂಗಳೂರು: ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಗೆಳೆಯನನ್ನು ವ್ಯಕ್ತಿಯೊಬ್ಬ ಸಹಚರನೊಂದಿಗೆ ಸೇರಿ ಕೊಲೆ ಮಾಡಿದ ಘಟನೆ ಡಿಜೆ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಪಿ.ಎನ್.ಟಿ. ಕಾಲೋನಿ ನಿವಾಸಿ ಸುಭಾನ್(30) ಕೊಲೆಯಾದ ವ್ಯಕ್ತಿ ಎನ್ನಲಾಗಿದೆ. ಕೊಲೆ ಆರೋಪಿ ತಬ್ರೇಜ್ ಮತ್ತು ಆತನ ಸಹಚರ ತಲೆಮರೆಸಿಕೊಂಡಿದ್ದು ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಚಾಲಕನಾಗಿದ್ದ ಸುಭಾನ್, ಆರೋಪಿ ತಬ್ರೇಜ್ ಸ್ನೇಹಿತರಾಗಿದ್ದು ತಬ್ರೇಜ್ ಪತ್ನಿಯೊಂದಿಗೆ ಸುಭಾನ್ ಅಕ್ರಮ ಸಂಬಂಧ ಬೆಳೆಸಿದ್ದ. ತಬ್ರೇಜ್ ಇಲ್ಲದ ವೇಳೆಯಲ್ಲಿ ಮನೆಗೆ ಹೋಗಿ ಬರುತ್ತಿದ್ದ. ಈ ವಿಚಾರ ಗೊತ್ತಾದ ತಬ್ರೇಜ್ ಪತ್ನಿ ಮತ್ತು ಸುಭಾನ್ ಗೆ ಎಚ್ಚರಿಕೆ ನೀಡಿದ್ದಾನೆ.

8 ತಿಂಗಳ ಹಿಂದೆ ಸುಭಾನ್ ಜೊತೆಗೆ ತಬ್ರೇಜ್ ಪತ್ನಿ ಮನೆಬಿಟ್ಟು ಹೋಗಿದ್ದು, ಕೆಲವು ದಿನಗಳ ಹಿಂದೆ ಮನೆಗೆ ವಾಪಸಾಗಿದ್ದಳು. ಮತ್ತೆ ಆತನೊಂದಿಗೆ ಮನೆ ಬಿಟ್ಟು ಹೋಗಲು ತಯಾರಿ ನಡೆಸಿದ್ದಳು. ಈ ವಿಚಾರ ಗೊತ್ತಾದ ತಬ್ರೇಜ್ ಸಹಚರನೊಂದಿಗೆ ಸೇರಿ ಶನಿವಾರ ರಾತ್ರಿ ಮಾರಕಾಸ್ತ್ರಗಳಿಂದ ಥಳಿಸಿ ಸುಭಾನ್ ನನ್ನು ಕೊಲೆ ಮಾಡಿದ್ದಾನೆ. ಬಳಿಕ ಮೃತದೇಹವನ್ನು ಡಿಜೆ ಹಳ್ಳಿಯ ಶಾಂಪುರ ಗೇಟ್ ಬಳಿ ಚರಂಡಿಯಲ್ಲಿ ಎಸೆದು ಪರಾರಿಯಾಗಿದ್ದಾರೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...