alex Certify ಹನುಮಾನ್ ಗುಂಡಿಯ ಅಂದ ವರ್ಣಿಸಲಸದಳ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹನುಮಾನ್ ಗುಂಡಿಯ ಅಂದ ವರ್ಣಿಸಲಸದಳ…!

ಪಶ್ಚಿಮ ಘಟ್ಟದ ಕುದುರೆಮುಖ ಅಭಯಾರಣ್ಯ ವನಸಿರಿಯ ಮಧ್ಯೆ ಕಂಗೊಳಿಸುವ ರಮಣೀಯ ನೂರಾರು ಜಲಧಾರೆಗಳ ಪೈಕಿ ಹನುಮಾನ್ ಗುಂಡಿಯೂ ಒಂದು. ಪ್ರವಾಸ ಪ್ರಿಯರಿಗೆ ಇದೊಂದು ಒಳ್ಳೆಯ ತಾಣ.

ತುಂಗಾ ನದಿ ಸೃಷ್ಟಿಸಿರುವ ಈ ಜಲಪಾತ ಭದ್ರಾ ಅಭಯಾರಣ್ಯ ವ್ಯಾಪ್ತಿಯಲ್ಲಿದೆ. ಈ ಜಲಪಾತದ ನಿಜವಾದ ಹೆಸರು ಸೂತನಬ್ಬಿ. ಇದು ಇರುವ ಜಾಗ ಹನುಮಾನ್ ಗುಂಡಿ ಆದ್ದರಿಂದ ಅದೇ ಹೆಸರನ್ನು ಹೊತ್ತು ತಂದಿದೆ. ಹಿಂದೆ ಹನುಮಂತನು ಈ ದಾರಿಯಾಗಿ ಹಾರಿ ಹೋಗುವಾಗ ಇಲ್ಲೊಂದು ಕಾಲು ಇರಿಸಿದ್ದರಿಂದ ಈ ಹೆಸರು ಬಂದಿದೆ ಎನ್ನಲಾಗಿದೆ.

ಮಳೆಗಾಲದಲ್ಲಿ ಇಲ್ಲಿಗೆ ಹೋಗುವವರು ಸ್ವಲ್ಪ ಎಚ್ಚರಿಕೆ ವಹಿಸಿಕೊಂಡು ಹೋದರೆ ಒಳ್ಳೆಯದು. ಯಾಕೆಂದರೆ ಇಲ್ಲಿ ಉಂಬಳದ ಕಾಟ ಇರುತ್ತದೆ. ಅರಣ್ಯ ಇಲಾಖೆಯವರು ಇಲ್ಲಿ ಮೆಟ್ಟಿಲುಗಳನ್ನು ನಿರ್ಮಿಸಿದ್ದಾರೆ. ಹಾಗಾಗಿ ಇಲ್ಲಿ ಇಳಿಯುವಾಗ ಧುಮ್ಮಿಕ್ಕುವ ಜಲಪಾತದ ಸೌಂದರ್ಯವನ್ನು ಕಣ್ತುಂಬಿಸಿಕೊಳ್ಳಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...