alex Certify ʼಬಿಗ್ ಬಾಸ್ʼ ನಲ್ಲಿ ಸ್ಪರ್ಧಿಸಿದ್ದ ಮತ್ತೋರ್ವ ನಟಿಗೂ ಇದೆ ಡ್ರಗ್ಸ್ ನಂಟು…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಬಿಗ್ ಬಾಸ್ʼ ನಲ್ಲಿ ಸ್ಪರ್ಧಿಸಿದ್ದ ಮತ್ತೋರ್ವ ನಟಿಗೂ ಇದೆ ಡ್ರಗ್ಸ್ ನಂಟು…?

ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಬಗೆದಷ್ಟು ಮಾಹಿತಿಗಳು ಹೊರಬರುತ್ತಿದ್ದು, ಇದೀಗ ಬಿಗ್ ಬಾಸ್ ನಲ್ಲಿ ಸ್ಪರ್ಧಿಸಿದ್ದ ಮತ್ತೋರ್ವ ನಟಿಗೂ ಡ್ರಗ್ಸ್ ನಂಟಿದೆ ಎನ್ನಲಾಗುತ್ತಿದೆ.

ಡ್ರಗ್ಸ್ ಪ್ರಕರಣದಲ್ಲಿ ಬಂಧಿತನಾಗಿರುವ ಕೊರಿಯೋಗ್ರಾಫರ್ ಸ್ಯಾಮ್ ಫರ್ನಾಂಡೀಸ್, ಸಿಸಿಬಿ ವಿಚಾರಣೆ ವೇಳೆ ಹಲವು ಸ್ಫೋಟಕ ಮಾಹಿತಿ ಬಾಯ್ಬಿಡುತ್ತಿದ್ದು, ನಿರೂಪಕಿ ಅನುಶ್ರೀ ಜೊತೆಗೆ ಮತ್ತೋರ್ವ ರಿಯಾಲಿಟಿ ಶೋ ಸ್ಟಾರ್ ಗೂ ಡ್ರಗ್ಸ್ ಜಾಲದ ನಂಟಿದೆ ಎಂದಿದ್ದಾನೆ.

ಬೆಂಗಳೂರು ಮೂಲದ ಈ ನಟಿ ಬಿಗ್ ಬಾಸ್ ರಿಯಾಲಿಟಿ ಶೋ ನಲ್ಲಿ ಕೂಡ ಭಾಗವಹಿಸಿದ್ದು, ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅನುಶ್ರೀ ಜೊತೆಗೆ ಈಕೆ ಕೂಡ ಡ್ರಗ್ಸ್ ಪಾರ್ಟಿಗಳಲ್ಲಿ ಭಾಗಿಯಾಗುತ್ತಿದ್ದಳು ಎಂದು ಹೇಳಿದ್ದಾನೆ ಎನ್ನಲಾಗಿದೆ.

ಈಗಾಗಲೇ ಆ ಸ್ಟಾರ್ ನಟಿಯ ಡ್ರಗ್ಸ್ ಜಾಲದ ಬಗ್ಗೆಯೂ ಸಿಸಿಬಿ ಮಾಹಿತಿ ಕಲೆಹಾಕಿದ್ದು, ಶೀಘ್ರದಲ್ಲೇ ಆಕೆಯನ್ನು ವಿಚಾರಣೆಗೆ ಒಳಪಡಿಸಲಿದೆ ಎಂದು ತಿಳಿದುಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...