alex Certify ಆರ್ಯನ್​ ಪರ ಭಾವನಾತ್ಮಕ ಪೋಸ್ಟ್​ ಶೇರ್​ ಮಾಡಿದ ಹೃತಿಕ್​ಗೆ ಟಾಂಗ್​ ಕೊಟ್ಟ ಕಂಗನಾ​​​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆರ್ಯನ್​ ಪರ ಭಾವನಾತ್ಮಕ ಪೋಸ್ಟ್​ ಶೇರ್​ ಮಾಡಿದ ಹೃತಿಕ್​ಗೆ ಟಾಂಗ್​ ಕೊಟ್ಟ ಕಂಗನಾ​​​

ಶಾರೂಕ್​ ಖಾನ್​ ಪುತ್ರ ಆರ್ಯನ್​ ಖಾನ್​ ಡ್ರಗ್​ ಪ್ರಕರಣದಡಿಯಲ್ಲಿ ಎನ್​ಸಿಬಿ ವಶದಲ್ಲಿರುವ ನಡುವೆಯೇ ಸಾಕಷ್ಟು ಬಾಲಿವುಡ್​ ತಾರೆಯರು ಆರ್ಯನ್​ ಪರ ದನಿ ಎತ್ತಿದ್ದಾರೆ. ಇಂದು ಈ ಸಾಲಿಗೆ ಹೃತಿಕ್​ ರೋಷನ್​ ಕೂಡ ಸೇರಿದ್ದು ತಮ್ಮ ಸೋಶಿಯಲ್​ ಮೀಡಿಯಾ ಖಾತೆಯ ಮೂಲಕ ಆರ್ಯನ್​​ ಪರವಾಗಿ ಭಾವನಾತ್ಮಕವಾಗಿ ಬರೆದಿದ್ದರು. ಆದರೆ ಹೃತಿಕ್​ ರೋಷನ್​​ನರ ಈ ಪೋಸ್ಟ್​ಗೆ ನಟಿ ಕಂಗನಾ ರಣಾವತ್​ ಭರ್ಜರಿ ಟಾಂಗ್​ ನೀಡಿದ್ದಾರೆ.

ಇವರೇ ನೋಡಿ ವಿಶ್ವದಲ್ಲೇ ಅತಿ ಉದ್ದದ ಮೂಗು ಹೊಂದಿರುವ ವ್ಯಕ್ತಿ..!

ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಶೇರ್​ ಮಾಡಿರುವ ನಟಿ ಕಂಗನಾ ರಣಾವತ್, ಈಗ ಎಲ್ಲಾ ಮಾಫಿಯಾ ಪಪ್ಪುಗಳು ಆರ್ಯನ್​ರನ್ನು ರಕ್ಷಣೆ ಮಾಡಲು ಮುಂದಾಗಿವೆ. ನಾವೆಲ್ಲರೂ ತಪ್ಪು ಮಾಡುತ್ತೇವೆ. ಆದರೆ ಆ ತಪ್ಪನ್ನೇ ವೈಭವೀಕರಿಸಬಾರದು. ಈ ಘಟನೆಗಳು ಅವನನ್ನು ಮುಂದೆ ಸರಿದಾರಿಯಲ್ಲಿ ನಡೆಯುವಂತೆ ಮಾಡಬಹುದು. ಒಬ್ಬರು ದುರ್ಬಲರಾದ ಅವರನ್ನು ಆಡಿಕೊಳ್ಳುವುದು ತಪ್ಪು. ಆದರೆ ಅವರು ತಪ್ಪೇ ಮಾಡಿಲ್ಲ ಎಂಬಂತೆ ಮಾತನಾಡುವುದು ಅಪರಾಧ ಎಂದು ಬರೆದಿದ್ದಾರೆ.

ಆಧಾರ್-ಪಾನ್ ಹೊಂದಿರುವವರು ಈಗ್ಲೇ ಮಾಡಿ ಈ ಕೆಲಸ

ಬೆಳಗ್ಗೆ ಆರ್ಯನ್​ ಪರವಾಗಿ ನಟ ಹೃತಿಕ್​ ರೋಷನ್​ ಭಾವನಾತ್ಮಕವಾಗಿ ಪೋಸ್ಟ್​ ಶೇರ್​ ಮಾಡಿದ್ದರು. ನನ್ನ ಪ್ರೀತಿಯ ಆರ್ಯನ್​, ಜೀವನವೇ ಒಂದು ವಿಚಿತ್ರವಾದ ಪಯಣ. ಆದರೆ ಈ ಪಯಣ ಅನಿಶ್ಚಿತತೆಯಿಂದ ಕೂಡಿದೆ. ಈ ಅನಿಶ್ಚಿತತೆಯಲ್ಲಿ ನಿಮ್ಮನ್ನು ನೀವು ಹೇಗೆ ಹಿಡಿದಿಟ್ಟುಕೊಳ್ಳುವಿರಿ ಎಂಬುದನ್ನು ದೇವರು ನೋಡ್ತಿರ್ತಾನೆ. ಜಾಗರೂಕನಾಗಿರು. ದಯೆ, ಸಹಾನುಭೂತಿ, ಪ್ರೀತಿ ನಿನ್ನನ್ನು ಆವರಿಸಿಕೊಳ್ಳಲಿ. ವೈಫಲ್ಯ, ಗೆಲುವು, ಯಶಸ್ಸು ಇವುಗಳಲ್ಲಿ ಯಾವುದನ್ನು ಇಟ್ಟುಕೊಳ್ಳಬೇಕು ಹಾಗೂ ಯಾವುದನ್ನು ಇಟ್ಟುಕೊಳ್ಳಬಾರದು ಎಂಬುದನ್ನು ನೀನು ಅರ್ಥ ಮಾಡಿಕೊಂಡರೆ ಸಾರ್ಥಕ.

ನಾನು ನಿನ್ನ ಚಿಕ್ಕಂದಿನಿಂದಲೂ ನೋಡಿದ್ದೇನೆ. ಶಾಂತವಾಗಿರು. ನಿನ್ನ ಮುಂದೆ ದೊಡ್ಡ ಬೆಳಕಿದೆ. ಈ ಬೆಳಕಿನ ಹಾದಿಯಲ್ಲಿ ಸಾಗಲು ನೀನು ಕತ್ತಲೆಯನ್ನು ದಾಟಲೇಬೇಕು. ನಿನ್ನನ್ನು ಎಂದಿಗೂ ಪ್ರೀತಿಸುತ್ತೇನೆ ಎಂದು ಬರೆದುಕೊಂಡಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...