alex Certify ಇವರೇ ನೋಡಿ ವಿಶ್ವದಲ್ಲೇ ಅತಿ ಉದ್ದದ ಮೂಗು ಹೊಂದಿರುವ ವ್ಯಕ್ತಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇವರೇ ನೋಡಿ ವಿಶ್ವದಲ್ಲೇ ಅತಿ ಉದ್ದದ ಮೂಗು ಹೊಂದಿರುವ ವ್ಯಕ್ತಿ..!

ಗಿನ್ನೆಸ್​ ದಾಖಲೆ ಮಾಡೋದಕ್ಕೆ ಅನೇಕ ಕಾರಣಗಳು ಇವೆ. ನೀವು ಸಾಧನೆ ಮಾಡಿ ತೋರಿಸಿ ವಿಶ್ವ ದಾಖಲೆ ಪುಸ್ತಕ ಸೇರಬಹುದು. ಇಲ್ಲವೇ ನಿಮ್ಮ ದೇಹದ ಆಕೃತಿ ಕೂಡ ನಿಮ್ಮನ್ನು ಗಿನ್ನೆಸ್​ ಪುಟದಲ್ಲಿ ನಮೂದಾಗುವಂತೆ ಮಾಡುವ ಸಾಮರ್ಥ್ಯ ಹೊಂದಿದೆ.

ಅದೇ ರೀತಿ ಮೆಹ್ಮೆಟ್​​ ಒಜುರೆಕ್​ ಎಂಬವರು ತಮ್ಮ ಮೂಗಿನ ಕಾರಣಕ್ಕೆ ವಿಶ್ವ ದಾಖಲೆಯನ್ನು ಮಾಡಿದ್ದಾರೆ.

ಮೆಹ್ಮೆಟ್​ ಒಜುರೆಕ್​​​ ಇಟಲಿಯ ಟಿವಿ ಶೋ ಒಂದರಲ್ಲಿ ಕಾಣಿಸಿಕೊಂಡಿದ್ದು, ಇಲ್ಲಿ ಅವರ ಮೂಗಿನ ಅಳತೆಯನ್ನು ಮಾಡಲಾಗಿದೆ. ಒಜುರೆಕ್​ ಮೂಗು ಬರೋಬ್ಬರಿ 8.8 ಸೆಂಟಿ ಮೀಟರ್​ ಉದ್ದವಿದೆ..!

2010ರಲ್ಲೇ ಒಜುರೆಕ್​ ತಮ್ಮ ಉದ್ದವಾದ ಮೂಗಿನ ಕಾರಣಕ್ಕೆ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ವಿಶ್ವದಲ್ಲೇ ಅತ್ಯಂತ ಉದ್ದ ಮೂಗನ್ನು ಹೊಂದಿರುವ ಜೀವಿತ ವ್ಯಕ್ತಿ ಎಂಬ ಕೀರ್ತಿ ಒಜುರೆಕ್​ಗೆ ಸಲ್ಲುತ್ತದೆ.

ಹಾಗಂತ ಪ್ರಪಂಚದಲ್ಲೆ ಇದುವರೆಗೆ ಇಷ್ಟೊಂದು ಉದ್ದದ ಮೂಗನ್ನು ಹೊಂದಿರುವ ಏಕೈಕ ವ್ಯಕ್ತಿ ಒಜುರೆಕ್​ ಅಲ್ಲ. ಏಕೆಂದರೆ 1770ರಲ್ಲಿ ಇಂಗ್ಲೀಷ್​ ಸರ್ಕಸ್​ ಸ್ಟಾರ್​ ಥೋಮಸ್​ ವೆಡ್ಡರ್ಸ್​ ಎಂಬವರು ಬರೋಬ್ಬರಿ 19 ಸೆಂಟಿಮೀಟರ್​ ಉದ್ದದ ಮೂಗನ್ನು ಹೊಂದಿದ್ದರು ಎಂದು ಗಿನ್ನೆಸ್​ ದಾಖಲೆ ಪುಸ್ತಕದಲ್ಲಿ ನಮೂದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...