alex Certify JOB ALERT : ಕೆಲಸ ಹುಡುಕುತ್ತಿರುವವರಿಗೆ ಗುಡ್ ನ್ಯೂಸ್ : ನಾಳೆ ಮಡಿಕೇರಿಯಲ್ಲಿ ‘ಉದ್ಯೋಗ ಮೇಳ’ ಆಯೋಜನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

JOB ALERT : ಕೆಲಸ ಹುಡುಕುತ್ತಿರುವವರಿಗೆ ಗುಡ್ ನ್ಯೂಸ್ : ನಾಳೆ ಮಡಿಕೇರಿಯಲ್ಲಿ ‘ಉದ್ಯೋಗ ಮೇಳ’ ಆಯೋಜನೆ

ಮಡಿಕೇರಿ : ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಹಾಗೂ ಕುಶಾಲನಗರ ಮಹಾತ್ಮ ಗಾಂಧಿ ಮೆಮೋರಿಯಲ್ ಪದವಿ ಕಾಲೇಜು ಇವರ ಸಹಯೋಗದಲ್ಲಿ ಜೂನ್, 22 ರಂದು ಬೆಳಗ್ಗೆ 10.30 ಯಿಂದ ಮಧ್ಯಾಹ್ನ 3 ಗಂಟೆ ವರೆಗೆ ಕುಶಾಲನಗರದ ಮಹಾತ್ಮ ಗಾಂಧಿ ಮೆಮೋರಿಯಲ್ ಪದವಿ ಕಾಲೇಜಿನಲ್ಲಿ ಉದ್ಯೋಗ ಮೇಳ ನಡೆಯಲಿದೆ.

ಈ ಉದ್ಯೋಗ ಮೇಳದಲ್ಲಿ, ದಿಯಾ ಸಿಸ್ಟಮ್ ಪ್ರೈವೇಟ್ ಲಿಮಿಟೆಡ್ ಮಂಗಳೂರು, ರಾಣಿ ಮದ್ರಾಸ್-ಮೈಸೂರು, ಜಸ್ಟ್ ಡಯಲ್-ಬೆಂಗಳೂರು, ಈಕ್ವಲೈಜರ್ ಆರ್ಎಂಸಿ-ಮೈಸೂರು, ಪ್ಯಾಲೆಸ್ ಟೊಯೋಟಾ ಕುಶಾಲನಗರ, ಅಲ್ಫಾ ಟೆಕ್ನಾಲಜಿ-ಮಡಿಕೇರಿ, ಪುಜಿಟೆಕ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಬೆಂಗಳೂರು, ಎಸ್ಎಲ್ಎನ್ ಕಾಫಿ ಪ್ರೈವೇಟ್ ಲಿಮಿಟೆಡ್ ಕೂಡಿಗೆ, ಮ್ಯಾಜಿಕ್ ಬಸ್ ಇಂಡಿಯಾ ಬೆಂಗಳೂರು, ಪರ್ಪಲ್ ಪಾಲ್ಮ್ ರೆಸಾರ್ಟ್ ಮತ್ತು ಸ್ಪಾ-ಕುಶಾಲನಗರ ತಮ್ಮ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಿದ್ದಾರೆ.
ಈ ಮೇಳದಲ್ಲಿ ಖಾಸಗಿ ಕಂಪನಿಗಳು ಭಾಗವಹಿಸಿ ತಮ್ಮಲ್ಲಿ ಖಾಲಿಯಿರುವ ಹುದ್ದೆಗಳನ್ನು ನೇರ ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳಲಿದ್ದಾರೆ. ಈ ಉದ್ಯೋಗ ಮೇಳದಲ್ಲಿ ಎಸ್ಸೆಸ್ಸೆಲ್ಸಿ ಕ್ಕಿಂತ ಕಡಿಮೆ, ಎಸ್ಸೆಸ್ಸೆಲ್ಸಿ, ಪಿಯುಸಿ, ಐಟಿಐ,ಡಿಪ್ಲೊಮಾ, ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಹತೆ ಹೊಂದಿರುವ ಉದ್ಯೋಗಕಾಂಕ್ಷಿಗಳು ಭಾಗವಹಿಸಿ ಉದ್ಯೋಗದ ನೆರವನ್ನು ಪಡೆಯಬಹುದಾಗಿದೆ. ಅಭ್ಯರ್ಥಿಗಳು ಸ್ವಯಂ-ವಿವರ (ಬಯೋಡೇಟಾ)ಗಳ ಪ್ರತಿಗಳೊಂದಿಗೆ ಉದ್ಯೋಗಮೇಳಕ್ಕೆ ಹಾಜರಾಗುವುದು.

ಹೆಚ್ಚಿನ ಮಾಹಿತಿಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಮಡಿಕೇರಿ, ಕಚೇರಿಯನ್ನು ಖುದ್ದಾಗಿ ಅಥವಾ ದೂ.ಸಂ. 08272-225851 ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿ ಉಮಾ ಅವರು ತಿಳಿಸಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...