alex Certify ಹೆರಿಗೆಗೆ ಹೋದ ಪತ್ನಿ, ಮಗುವಿಗೆ ಜನ್ಮ ನೀಡಿದ ಪ್ರಿಯತಮೆ: ನವಜಾತ ಶಿಶು ಕೊಂದ ತಂದೆ, ಅಜ್ಜಿ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೆರಿಗೆಗೆ ಹೋದ ಪತ್ನಿ, ಮಗುವಿಗೆ ಜನ್ಮ ನೀಡಿದ ಪ್ರಿಯತಮೆ: ನವಜಾತ ಶಿಶು ಕೊಂದ ತಂದೆ, ಅಜ್ಜಿ ಅರೆಸ್ಟ್

ಮಡಿಕೇರಿ: ಅಕ್ರಮ ಸಂಬಂಧದಿಂದ ಜನಿಸಿದ ನವಜಾತ ಶಿಶುವನ್ನು ತಂದೆ, ಅಜ್ಜಿ ಕುತ್ತಿಗೆ ಹಿಸುಕಿ ಕೊಂದ ದಾರುಣ ಘಟನೆ ಕೊಡಗು ಜಿಲ್ಲೆ ಕುಶಾಲನಗರ ತಾಲೂಕಿನ ಗದ್ದೆಹಳ್ಳ ಗ್ರಾಮದಲ್ಲಿ ನಡೆದಿದೆ.

ನವಜಾತ ಶಿಶುವಿನ ತಂದೆ ಕುಮಾರ್(37), ಅಜ್ಜಿ ಯಮುನಾ(57) ಅವರನ್ನು ಸುಂಟಿಕೊಪ್ಪ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕುಮಾರನಿಗೆ ಮದುವೆಯಾಗಿದ್ದರೂ ಮತ್ತೊಬ್ಬ ಯುವತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಪತ್ನಿ ಹೆರಿಗೆಗೆ ಹೋಗಿದ್ದರಿಂದ ಗರ್ಭಿಣಿಯಾಗಿದ್ದ ಯುವತಿಯನ್ನು ಮನೆಗೆ ಕರೆದುಕೊಂಡು ಬಂದಿದ್ದ. ಮನೆಯಲ್ಲಿಯೇ ಯುವತಿ ಮಗುವಿಗೆ ಜನ್ಮ ನೀಡಿದ್ದಾಳೆ. ಮಗುವನ್ನು ತಾನೇ ಸಾಕುವುದಾಗಿ ಭರವಸೆ ನೀಡಿದ ಕುಮಾರ ಯುವತಿಯನ್ನು ಆಕೆಯ ಮನೆಗೆ ಕಳುಹಿಸಿದ್ದಾನೆ.

ಯುವತಿ ಮನೆಯಿಂದ ಹೋದ ಕೂಡಲೇ ತಾಯಿಯೊಂದಿಗೆ ಸೇರಿ ಮಗುವಿನ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಬೆಳಗಿನ ಜಾವ ಸಮೀಪದ ಗದ್ದೆಯಲ್ಲಿ ಗುಂಡಿ ತೆಗೆದು ಶಿಶುವಿನ ಶವ ಹೂತು ಹಾಕಿದ್ದಾರೆ. ಇವರು ಗದ್ದೆಯಲ್ಲಿ ಗುಂಡಿ ತೆಗೆಯುವುದನ್ನು ಗಮನಿಸಿದ ಸ್ಥಳೀಯರು ಗುಂಡಿ ಮಣ್ಣು ತೆಗೆದು ನೋಡಿದಾಗ ಗಂಡು ಶಿಶುವಿನ ಶವ ಪತ್ತೆಯಾಗಿದೆ. ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...