alex Certify ನೊಂದವರ ಮಾತು ಕೇಳಿಸಿಕೊಳ್ಳಲು ಬಾಡಿಗೆಗೆ ಸಿಗುತ್ತಾನೆ ಯುವಕ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೊಂದವರ ಮಾತು ಕೇಳಿಸಿಕೊಳ್ಳಲು ಬಾಡಿಗೆಗೆ ಸಿಗುತ್ತಾನೆ ಯುವಕ…!

ಬಹುತೇಕರು ತಮ್ಮ ಜೀವನವು ಸುಖಮಯವಾಗಿ, ಐಷಾರಾಮಿಯಾಗಿ, ಸ್ಥಿರ ಆರ್ಥಿಕ ಹರಿವು ಇರುವಂತೆ ಮಾಡಿಕೊಳ್ಳಲು ನಿತ್ಯವೂ ಶ್ರಮಿಸುತ್ತಾರೆ. ವಿವಿಧ ರೀತಿಯ ಕೆಲಸಗಳು, ಉಪವೃತ್ತಿಗಳು, ಪಾರ್ಟ್ಟೈಮ್ ಕೆಲಸಗಳನ್ನು ಮಾಡುತ್ತಲೇ ಅರ್ಧ ಜೀವನ ಕಳೆಯುತ್ತಾರೆ.

ಆದರೆ, 38 ವರ್ಷದ ಜಪಾನ್ ಯುವಕ ಏನನ್ನೂ ಮಾಡದೆಯೇ, ಕೇವಲ ತನ್ನನ್ನು ಬಾಡಿಗೆಗೆ ನೀಡಿ ಸಾವಿರಾರು ಗ್ರಾಹಕರನ್ನು ಗಳಿಸಿದ್ದಾನೆ. ಲಕ್ಷಾಂತರ ಹಣ ದುಡಿಯುತ್ತಿದ್ದಾನೆ.

ಹೌದು, ಜನರಿಗೆ ಆತ್ಮೀಯರ ಬಳಿ ಮತ್ತು ಕುಟುಂಬಸ್ಥರ ಬಳಿ ಹೇಳಿಕೊಳ್ಳಲಾಗದ ನೂರಾರು ಸಮಸ್ಯೆಗಳು ಹಾಗೂ ರಹಸ್ಯಗಳು ಇರುತ್ತವೆ. ಆ ರಹಸ್ಯಗಳೇ ಅವರ ತಲೆಯಲ್ಲಿ ಹಲವು ಚಿಂತನ-ಮಂಥನಗಳಿಗೆ ಕಾರಣವಾಗಿ ಪ್ರಾಯಶ್ಚಿತ, ಬಿಡುಗಡೆಯ ದಾರಿಗಳನ್ನು ಹುಡುಕುತ್ತಿರುತ್ತಾರೆ.

ʼಬ್ಲಾಂಕೆಟ್‌ ಆಕ್ಟೋಪಸ್‌ʼ ನರ್ತಿಸುವ ಅಪರೂಪದ ವಿಡಿಯೊ ವೈರಲ್‌

ಮನಸ್ಸಿನ ಎಲ್ಲ ರಹಸ್ಯಗಳನ್ನು ಶೀಘ್ರ ಹೊರಹಾಕಲು ಅವರಿಗೆ ಒಂದು ಕೇಳಿಸಿಕೊಳ್ಳುವ ಮನಸ್ಸು ಬೇಕು. ತಮಗೆ ಸಾಂತ್ವನ ಹೇಳುವ, ಸಿಡಿಮಿಡಿ ಮಾಡದ ಹೃದಯಬೇಕು. ಹಾಗಾಗಿ ಅವರು ಆತ್ಮೀಯ ಒಡನಾಡಿಗಳ ಹುಡುಕಾಟದಲ್ಲಿ ಇರುತ್ತಾರೆ. ಅಂಥವರೇ 38ರ ಯುವಕ ಶೋಜಿ ಮೊರಿಮೊತೊನನ್ನು ಬಾಡಿಗೆಗೆ ಪಡೆಯುತ್ತಿದ್ದಾರೆ.

ಈತ ಸುಮ್ಮನೆ ಕುಳಿತು ಜನರ ಮನಸ್ಸಿನ ಎಲ್ಲ ಚಿಂತನೆಗಳನ್ನು ತನ್ನ ಕಿವಿಗೆ ಹಾಕಿಕೊಳ್ಳುತ್ತಾನೆ. ಅತ್ಯಂತ ಕನಿಷ್ಠ ಭಾವನೆಯನ್ನು ಮಾತ್ರವೇ ಹೊರಹಾಕುತ್ತಾನೆ.

ಮುಖಾಮುಖಿ ಸಂಭಾಷಣೆ ನಂತರವೂ ಹಲವು ಜನರು ಶೋಜಿ ಅವರನ್ನು ಚಾಟಿಂಗ್‌ನಲ್ಲಿ ಕಾಡುತ್ತಾರೆ. ಇನ್ನಷ್ಟು ಭಾವನೆಗಳನ್ನು ಹೊರಹಾಕುತ್ತಲೇ ಇರುತ್ತಾರೆ. ಅದಕ್ಕೆ ಶೋಜಿ, ಸಣ್ಣ ಪ್ರತಿಕ್ರಿಯೆ ನೀಡುತ್ತಾ ಸಂಭಾಳಿಸುತ್ತಾರೆ.

ಇಷ್ಟೆಲ್ಲ ಹೊರಗಿನ ಭಾವನೆಗಳನ್ನು ತಮ್ಮಲ್ಲಿ ತುಂಬಿಕೊಳ್ಳಲು ಶೋಜಿ ತನ್ನ ಗ್ರಾಹಕರಿಂದ ಶುಲ್ಕ ಪಡೆಯುತ್ತಾನೆ. ಇವರ ಗ್ರಾಹಕರ ಪೈಕಿ ಬಹುತೇಕರು ವೈದ್ಯರು, ನರ್ಸ್‌ ಗಳು, ಸರಕಾರಿ ಅಧಿಕಾರಿಗಳು, ಉದ್ಯಮಿಗಳಾಗಿದ್ದಾರೆ. ಬಹುತೇಕರು ತಮ್ಮ ಸಂಚಿನಿಂದಾದ ಅನಾಹುತಗಳ ಬಗ್ಗೆ ಹೇಳಿಕೊಳ್ಳುತ್ತಾರಂತೆ..!

2018 ರಿಂದ ಶೋಜಿ ಶುರು ಮಾಡಿದ ಈ ” ಡೂ ನಥಿಂಗ್ ರೆಂಟ್ ಎ ಮ್ಯಾನ್” ಸೇವೆ ಪಡೆದವರು ಮೂರು ಸಾವಿರ ಮಂದಿ. ಶೋಜಿಗೆ ಟ್ವಿಟರ್‌ನಲ್ಲಿ ಸಂಪರ್ಕಿಸಬಹುದು, ಆತನಿಗೆ 2 ಲಕ್ಷ ಫಾಲೋವರ್ಸ್ ಇದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...