alex Certify ʼಬ್ಲಾಂಕೆಟ್‌ ಆಕ್ಟೋಪಸ್‌ʼ ನರ್ತಿಸುವ ಅಪರೂಪದ ವಿಡಿಯೊ ವೈರಲ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಬ್ಲಾಂಕೆಟ್‌ ಆಕ್ಟೋಪಸ್‌ʼ ನರ್ತಿಸುವ ಅಪರೂಪದ ವಿಡಿಯೊ ವೈರಲ್‌

ಅತ್ಯಂತ ಅಪರೂಪದ ಸಮುದ್ರ ಜೀವಿಗಳಲ್ಲಿ ಒಂದಾದ ಬ್ಲಾಂಕೆಟ್‌ ಆಕ್ಟೋಪಸ್‌ ನರ್ತಿಸುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಹಳದಿ ಮತ್ತು ಕೇಸರಿ ಮಿಶ್ರಿತ ಚಿನ್ನದ ಬಣ್ಣದ ಆಕ್ಟೋಪಸ್‌ ಇದು. ಬಹಳ ಖುಷಿಯಿಂದ ಸಾಗರದ ಆಳದಲ್ಲಿಈಜಾಡುತ್ತಿದೆ. ಎಷ್ಟೋ ವರ್ಷಗಳಲ್ಲಿಒಮ್ಮೆ ಮಾತ್ರವೇ ಈ ಆಕ್ಟೋಪಸ್‌ ದರ್ಶನವಾಗುತ್ತದೆ.

ಇಂಥ ಅಪರೂಪದ ಜೀವಿಯ ವಿಡಿಯೊವನ್ನು ಸಾಗರದಾಳದ ಜೀವಿಗಳ ತಜ್ಞ ಜೆಸಿಂಟಾ ಶಾಕ್ಲೆಟನ್‌ ಅವರು ಕಳೆದ ವಾರ ಗ್ರೇಟ್‌ ಬ್ಯಾರಿಯರ್‌ ರೀಫ್‌ ಬಳಿಯ ಲೇಡಿ ಎಲ್ಲಿಯಾಟ್‌ ದ್ವೀಪದಲ್ಲಿ ಪತ್ತೆ ಮಾಡಿದ್ದಾರೆ. ಅದರ ವಿಡಿಯೊ ಮಾಡಿ , ಫೋಟೊಗಳನ್ನು ಕ್ಲಿಕ್ಕಿಸಿದ್ದಾರೆ.

ಈ ಬಗ್ಗೆ ಗಾರ್ಡಿಯನ್‌ ಆಸ್ಪ್ರೇಲಿಯಾ ಪತ್ರಿಕೆ ಜತೆಗೆ ಅನುಭವ ಹಂಚಿಕೊಂಡಿರುವ ಜೆಸಿಂಟಾ ಅವರು, ಸಾಗರದ ಆಳದಲ್ಲಿ ಇದನ್ನು ಕಂಡಾಗ ದಿಗ್ಬ್ರಮೆಗೊಂಡೆ. ಅದು ನನ್ನ ಹತ್ತಿರವೇ ಬರಲು ಶುರುಮಾಡಿದಾಗ , ಆಕ್ಟೋಪಸ್‌ ಹೆಣ್ಣು ಎಂದು ಗುರುತು ಹಿಡಿದೆ. ನನ್ನ ಮನಸ್ಸಿನಲ್ಲಿ ಅತ್ಯಂತ ಅಪರೂಪದ ಜೀವಿಯನ್ನು ಕಂಡ ಉಲ್ಲಾಸ ಉತ್ತುಂಗದಲ್ಲಿತ್ತು ಎಂದಿದ್ದಾರೆ.

ಬಣ್ಣ ಬದಲಾಯಿಸಿದ ಆಕ್ಟೋಪಸ್ ವಿಡಿಯೋ ವೈರಲ್

ನೀವು ನಂಬುತ್ತೀರೋ ಇಲ್ಲವೋ ಈ ಜಗತ್ತಿನಲ್ಲಿ ಬ್ಲ್ಯಾಂಕೆಟ್‌ ಆಕ್ಟೋಪಸ್‌ವೊಂದು ಗೋಚರವಾಗಿರುವುದು 21 ವರ್ಷಗಳ ಮುನ್ನ. ಅದು ಕೂಡ ಗಂಡು ಆಕ್ಟೋಪಸ್‌ ಆಗಿತ್ತು. ಡಾ. ಜುಲಿಯನ್‌ ಫಿನ್‌ ಅವರಿಗೆ ಗ್ರೇಟ್‌ ಬ್ಯಾರಿಯರ್‌ ರೀಫ್‌ ಬಳಿಯ ರಿಬ್ಬನ್‌ ರೀಫ್ಸ್‌ನಲ್ಲಿ ಕಾಣಿಸಿತ್ತು ಎಂದು ಹಲವು ವಿವರಗಳ ಸಮೇತ ಫೋಟೊ, ವಿಡಿಯೊಗಳನ್ನು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಜೆಸಿನಾ ಅವರು ಹಂಚಿಕೊಂಡಿದ್ದಾರೆ.

ಗಂಡು ಬ್ಲ್ಯಾಂಕೆಟ್‌ ಆಕ್ಟೋಪಸ್‌ಗಳು ಕೇವಲ 2.4 ಸೆ.ಮೀ. ಉದ್ದ ಬೆಳೆಯುತ್ತವೆ. ಆದರೆ, ಹೆಣ್ಣು ಆಕ್ಟೋಪಸ್‌ ಮಾತ್ರವೇ ಎರಡು ಮೀಟರ್‌ಗಳವರೆಗೆ ಬೆಳೆಯುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...