alex Certify ಕುದಿಯುವ ಎಣ್ಣೆಗೆ ಕೈ ಹಾಕಿ ಅಚ್ಚರಿ ಮೂಡಿಸಿದ ಪಕೋಡ ವ್ಯಾಪಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುದಿಯುವ ಎಣ್ಣೆಗೆ ಕೈ ಹಾಕಿ ಅಚ್ಚರಿ ಮೂಡಿಸಿದ ಪಕೋಡ ವ್ಯಾಪಾರಿ

ಕುದಿಯುವ ಎಣ್ಣೆಗೆ ಕೈ ಹಾಕುವ ವ್ಯಕ್ತಿ ವಿಡಿಯೋ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ. ಪಕೋಡವನ್ನು ಕರಿಯುವಾಗ ಕಾದ ಎಣ್ಣೆಯಲ್ಲಿ ಕೈ ಅದ್ದಿದರು ಏನು ರಿಯಾಕ್ಟ್ ಮಾಡದ ಬೀದಿ ಬದಿ ವ್ಯಾಪಾರಿಯ ವಿಡಿಯೋ ಇಂಟರ್ನೆಟ್ ಅನ್ನ ಆಶ್ಚರ್ಯಚಕಿತವಾಗಿಸಿದೆ.

ಮುಂಬೈನ ಫುಡ್ ಬ್ಲಾಗರ್ ಒಬ್ಬರು ಮಾರಾಟಗಾರರ ವಿಡಿಯೊವನ್ನು ರೆಕಾರ್ಡ್ ಮಾಡಿ ಅದನ್ನು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ಹೇಗೆ ಸಾಧ್ಯ ಎಂದು ಊಹೆ ಮಾಡೋಕು ಆಗದೆ, ಕಾದ ಎಣ್ಣೆಗೆ ಕೈ ಹಾಕಿದರು ಏನು ಆಗದ ಹೀಟ್ ಪ್ರೂಫ್ ಮಾನವನನ್ನ ನೋಡುತ್ತಿರಬೇಕಷ್ಟೆ. ಒಂದು ನಿಮಿಷಕ್ಕು ಕಮ್ಮಿ ಇರುವ ಈ ಚಿಕ್ಕ ಕ್ಲಿಪ್ 1 ಮಿಲಿಯನ್ ವೀಕ್ಷಣೆಗಳೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಜೈಪುರದ ಕಿಸಾನ್ ಪಕೋಡ್ ವಾಲಾ ಎಂಬ ಹೆಸರಿನ ರಸ್ತೆಬದಿಯ ಸ್ಟಾಲ್‌ನಲ್ಲಿ ವ್ಯಾಪಾರಿಯೊಬ್ಬರು ದೊಡ್ಡ ಬಾಣಲೆಯಲ್ಲಿ ಪಕೋಡವನ್ನು ಹುರಿಯುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದು. ಈ ವೇಳೆ ಕಾದ ಎಣ್ಣೆಯಲ್ಲಿ ಪಕೋಡ ಹಾಕಿ, ಅದರಲ್ಲೆ ಕೈ ಅದ್ದಿ ಬ್ಲಾಗರ್ ನ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಆಶ್ಚರ್ಯಕರವಾಗಿ, ಅವರ ಕೈಗಳು ಹಾನಿಗೊಳಗಾಗಿಲ್ಲ.

ಒಂದು ಹನಿ ಎಣ್ಣೆ ಬಿದ್ದರು ಚುರುಗುಡುತ್ತದೆ, ಹೀಗಿರುವಾಗ ಈತ ಕುದಿಯುವ ಎಣ್ಣೆಗೆ ಕೈ ಹಾಕಿ, ನೀರಿನಿಂದ ಕೈ ತೆಗೆದವನಂತೆ ಆರಾಮಾಗಿರುವುದು ಆಶ್ಚರ್ಯವೆ ಸರಿ. ವಿಡಿಯೊದ ಕೊನೆಯಲ್ಲಿ, ಫುಡ್ ಬ್ಲಾಗರ್ ಪಕೋಡಾಗಳನ್ನು ಸವಿಯುತ್ತ ಮತ್ತು ಅದಕ್ಕೆ ತನ್ನ ಅನುಮೋದನೆ ನೀಡುತ್ತಿರುವುದು ಕಂಡುಬಂದಿತು. ಜೈಪುರದ ಹವಾಮಹಲ್ ಪ್ರದೇಶದ, ಜೆಡಿಎ ಮಾರ್ಕೆಟ್ ನಲ್ಲಿ ಈ ಹೀಟ್ ಪ್ರೂಫ್ ಪಕೋಡವಾಲಾ ಅವರ ಫುಡ್ ಸ್ಟಾಲ್ ಇದೆ. ವೀಡಿಯೊ ವೈರಲ್ ಆಗುತ್ತಿದ್ದಂತೆ, ಸಾಮಾಜಿಕ ಮಾಧ್ಯಮ ಬಳಕೆದಾರರು ಕಳವಳ ವ್ಯಕ್ತಪಡಿಸಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...