alex Certify ವಿಮಾನ ಪ್ರಯಾಣ ಮಾಡಲು ಮುಂದಾಗುವವರಿಗೆ ಇಲ್ಲಿದೆ ಖುಷಿ ಸುದ್ದಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಮಾನ ಪ್ರಯಾಣ ಮಾಡಲು ಮುಂದಾಗುವವರಿಗೆ ಇಲ್ಲಿದೆ ಖುಷಿ ಸುದ್ದಿ….!

ಎಲ್ಲೆಡೆ ಸಾಂಕ್ರಮಿಕದ ಭೀತಿ ಇರುವ ಕಾರಣದಿಂದ ತಂತಮ್ಮ ವಿಮಾನಗಳು ಖಾಲಿ ಓಡಬೇಕಾದ ಪ್ರಮೇಯಕ್ಕೆ ಕಡಿವಾಣ ಹಾಕಲೆಂದು ದರಗಳ ಪೈಪೋಟಿಗೆ ಇಳಿದಿವೆ ವಿಮಾನಯಾನ ಸಂಸ್ಥೆಗಳು.

ಡಿಸೆಂಬರ್‌ನಲ್ಲಿ ಪ್ರತಿನಿತ್ಯ 3,80,000ದಷ್ಟು ಪ್ರಯಾಣಿಕರು ಸರಾಸರಿಯಂತೆ ವಿಮಾನಗಳಲ್ಲಿ ಸಂಚರಿಸುತ್ತಿದ್ದು, ಇದು ಸಾಂಕ್ರಮಿಕ-ಪೂರ್ವ ಕಾಲಘಟ್ಟದ 98%ನಷ್ಟಿದೆ. ಆದರೂ ಸಹ ಮುಂಗಡ ಬುಕಿಂಗ್‌ಗಳು ದುರ್ಬಲವಾಗಿದ್ದು, ಒಮಿಕ್ರಾನ್ ಭೀತಿಯ ನಡುವೆ ರಾಜ್ಯ ಸರ್ಕಾರಗಳು ಎಲ್ಲೆಡೆ ವಿಧಿಸುತ್ತಿರುವ ನಿರ್ಬಂಧಗಳ ಕಾರಣದಿಂದಾಗಿ ವಿಮಾನ ಪ್ರಯಾಣದ ವಿಚಾರವಾಗಿ ಸಾರ್ವಜನಿಕರ ಮನದಲ್ಲಿ ಅನಿಶ್ಚಿತತೆ ನೆಲೆಸಿದೆ.

ಉದ್ಯಮೇತರ ಪ್ರಯಾಣದ ವಿಚಾರಕ್ಕೆ ಬಂದಾಗ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಹೇಳಿಕೊಳ್ಳುವ ಮಟ್ಟದಲ್ಲಿ ಸೀಟುಗಳು ಬುಕ್ ಆಗುತ್ತಿಲ್ಲ.

ʼಐಟಿಆರ್‌ʼ ಫೈಲ್‌ ಮಾಡುವ ಮುನ್ನ ನೆನಪಿರಲಿ ಈ ವಿಷಯ

ಟಿಕೆಟ್‌ ದರಗಳ ಸಮರಕ್ಕೆ ಮುಂದಾಗಿರುವ ಗೋಫರ್ಸ್ಟ್, ಡಿಸೆಂಬರ್‌ 22ರಿಂದ, ದೇಶೀ ಮಾರ್ಗಗಳಲ್ಲಿ ಸಂಚರಿಸುವ ತನ್ನ ವಿಮಾನಗಳಲ್ಲಿ ಟಿಕೆಟ್ ಬುಕಿಂಗ್ ಮಾಡಲಿಚ್ಛಿಸುವ ಮಂದಿಗೆ, ತನ್ನದೇ ವೆಬ್‌ಸೈಟ್ ಆಥವಾ ಅಪ್ಲಿಕೇಶನ್‌ನಲ್ಲಿ 15 ದಿನಗಳ ಮುಂಗಡ ಬುಕಿಂಗ್ ಮಾಡುವ ವೇಳೆ, ಕೋವಿಡ್ ಲಸಿಕೆಯ ಪೂರ್ಣ ಕೋರ್ಸ್ ಮುಗಿಸಿದವರಿಗೆ 20% ನಷ್ಟು ರಿಯಾಯಿತಿ ನೀಡಲು ಮುಂದಾಗಿದೆ.

ಇದನ್ನೇ ಹಿಂಬಾಲಿಸಿದ ಸ್ಪೈಸ್‌ಜೆಟ್‌, ಡಿಸೆಂಬರ್‌ 27-31ರ ನಡುವೆ ಬೆಂಗಳೂರು-ಚೆನ್ನೈ, ಚೆನ್ನೈ-ಹೈದರಾಬಾದ್‌ ಮತ್ತು ಜಮ್ಮು-ಶ್ರೀನಗರದ ಮಾರ್ಗಗಳಲ್ಲಿ ಮಾಡುವ ಟಿಕೆಟ್ ಬುಕಿಂಗ್‌ಗಳಲ್ಲಿ, ಒನ್‌-ವೇ ದರಗಳನ್ನು 1,222ರೂಗಳಿಂದ ಆರಂಭಿಕ ಬೆಲೆ ನಿಗದಿ ಪಡಿಸಿದೆ.

ಜನವರಿ 15-ಏಪ್ರಿಲ್ 15ರವರೆಗೂ ಇರುವ ಈ ರಿಯಾಯಿತಿ ಸಮರದಲ್ಲಿ ಏರ್‌ಏಷ್ಯಾ ಮತ್ತು ಇಂಡಿಗೋ ಸಹ ಭಾಗಿಯಾಗಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...