alex Certify ಅಚ್ಚರಿಗೆ ಕಾರಣವಾಯ್ತು ವಿಶ್ವದ ಅತಿ ʼಶ್ರೀಮಂತʼ ಗಳಿಸಿದ ಅಂಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಚ್ಚರಿಗೆ ಕಾರಣವಾಯ್ತು ವಿಶ್ವದ ಅತಿ ʼಶ್ರೀಮಂತʼ ಗಳಿಸಿದ ಅಂಕ

ವಿಶ್ವದ ಅಗ್ರಗಣ್ಯ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಎಲಾನ್ ಮಸ್ಕ್​ ಒಂದಿಲ್ಲೊಂದು ಕಾರಣಕ್ಕೆ ಟ್ವಿಟರ್​ ಲೋಕದಲ್ಲಿ ಸುದ್ದಿ ಮಾಡ್ತಾನೇ ಇರ್ತಾರೆ. ಇದೀಗ ಮತ್ತೊಮ್ಮೆ ಎಲಾನ್ ಮಸ್ಕ್​ ನೆಟ್ಟಿಗರ ಚರ್ಚಾ ವಿಷಯವಾಗಿ ಬದಲಾಗಿದ್ದಾರೆ.

ಎಲಾನ್​ ಮಸ್ಕ್​​ರ ತಾಯಿ ಮೇಯ್​ ಮಸ್ಕ್​​ ಸಾಮಾಜಿಕ ಜಾಲತಾಣದಲ್ಲಿ ಕಂಪ್ಯೂಟರ್​ ಆಪ್ಟಿಟ್ಯೂಡ್​ ಟೆಸ್ಟ್​ನಲ್ಲಿ ಮಸ್ಕ್​ರ ಅಂಕಪಟ್ಟಿಯನ್ನ ಶೇರ್​ ಮಾಡಿದ್ದಾರೆ. ಇದು ಎಲಾನ್​ ಮಸ್ಕ್​ 17 ವರ್ಷ ವಯಸ್ಸಿನವರಾಗಿದ್ದಾಗಿನ ಅಂಕಪಟ್ಟಿಯಾಗಿದೆ. ಎಲಾನ್​ ಮಸ್ಕ್​​ ದಾಖಲೆಯ ಅಂಕವನ್ನ ಗಳಿಸಿದ್ದನ್ನ ನೋಡಿ ಶಾಕ್​ ಆದ ಶಿಕ್ಷಕರು ಮಸ್ಕ್​ರಿಗೆ ಮತ್ತೊಂದು ಬಾರಿ ಪರೀಕ್ಷೆ ಬರೆಯುವಂತೆ ಹೇಳಿದ್ದರಂತೆ .

ಎಲಾನ್​ ಮಸ್ಕ್​ರ ಈ ಬುದ್ಧಿವಂತಿಕೆ ಸೋಶಿಯಲ್​ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿದೆ. ಯಾರೂ ಗಳಿಸದ ಅಂಕ ಸಂಪಾದಿಸಿದ ಎಲಾನ್​ ಮಸ್ಕ್​​ ತಮ್ಮ ತಾಯಿಯ ಟ್ವಿಟರ್​ ಖಾತೆಯ ಮೂಲಕವೂ ಸದ್ದು ಮಾಡ್ತಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...