alex Certify 7 ಕೋಟಿ ರೂ. ಬಹುಮಾನದ ಲಾಟರಿ ಟಿಕೆಟ್ ಬಿಸಾಡಿದ್ದ ಮಹಿಳೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

7 ಕೋಟಿ ರೂ. ಬಹುಮಾನದ ಲಾಟರಿ ಟಿಕೆಟ್ ಬಿಸಾಡಿದ್ದ ಮಹಿಳೆ….!

ಲೇಡಿ ಲಕ್ ಅನ್ನೋದೇ ಹಾಗೆ ನೋಡಿ…! ಅಮೆರಿಕದ ಮಸ್ಸಾಚುಸೆಟ್ಸ್‌ನ ಮಹಿಳೆಯೊಬ್ಬರಿಗೆ ಈ ಲೇಡಿ ಲಕ್ ಒಮ್ಮೆ ಅಲ್ಲ ಎರಡು ಬಾರಿ ಖುಲಾಯಿಸಿದೆ.

ಕೋಟ್ಯಾಧೀಶೆಯಾಗುವ ಅವಕಾಶದಿಂದ ವಂಚಿತೆಯಾಗಲಿದ್ದ ಲಿಯಾ ರೋಸ್ ಫಿಗಾ ಹೆಸರಿನ ಈ ಮಹಿಳೆಗೆ ಪ್ರಾಮಾಣಿಕ ಪ್ರಜೆಗಳ ನೆರವಿನಿಂದ ಅದೃಷ್ಟ ಖುಲಾಯಿಸಿದೆ.

ಸ್ಥಳೀಯ ಅಂಗಡಿಯೊಂದರಲ್ಲಿ $1 ದಶಲಕ್ಷ ಮೌಲ್ಯದ ಲಾಟರಿ ಟಿಕೆಟ್ ಖರೀದಿ ಮಾಡಿದ್ದ ಲಿಯಾ ರೋಸ್‌, ತಾನು ಗೆಲ್ಲೋದು ಅಷ್ಟರಲ್ಲೇ ಇದೆ ಎಂದುಕೊಂಡು, ಕೂಡಲೇ ಆ ಟಿಕೆಟ್‌ ಅನ್ನು ಎಸೆದುಬಿಟ್ಟಿದ್ದರು. ಆಕೆಯ ಅದೃಷ್ಟಕ್ಕೆ ತನ್ನ ಲಾಟರಿ ಸಂಖ್ಯೆಗೇ ಬಂಪರ್‌ ಬಹುಮಾನ ಒಲಿದುಬಂದಿದೆ.

ಸಂಕಟ ಬಂದಾಗ ದೇವರ ಮೊರೆ ತಪ್ಪಲ್ಲ; ಆದರೆ ಈ ಸಂದರ್ಭದಲ್ಲಿ ಕಾನೂನು ಉಲ್ಲಂಘಿಸಿ ಜನರಿಂದ ಹೋಮ ಮಾಡಿಸುವುದು ಸರಿಯಲ್ಲ; ಶಾಸಕರ ವಿರುದ್ಧ ಡಿಸಿಎಂ ಕಿಡಿ

“ಭೋಜನದ ಬ್ರೇಕ್‌ನಲ್ಲಿದ್ದ ನಾನು ಹರಿಬರಿಯಲ್ಲಿ ಕೂಡಲೇ ಟಿಕೆಟ್‌ ಅನ್ನು ಸ್ಕ್ರಾಚ್‌ ಮಾಡಿ ನೋಡಿದೆ. ನಾನು ಗೆಲ್ಲುವ ಹಾಗೆ ಅನಿಸದೇ ಇದ್ದ ಕಾರಣ ಆ ಟಿಕೆಟ್‌ ಅನ್ನು ಅಂಗಡಿಯವರಿಗೆ ಕೊಟ್ಟು ಅದನ್ನು ಎಸೆಯಲು ಹೇಳಿದೆ” ಎಂದು ಲಿಯಾ ತಿಳಿಸಿದ್ದಾರೆ.

ಹತ್ತು ದಿನಗಳಿಂದ ಅಂಗಡಿಯ ಮೂಲೆಯಲ್ಲಿ ಬಿದ್ದಿದ್ದ ಈ ಟಿಕೆಟ್‌ ಅನ್ನು ಅಂಗಡಿ ಮಾಲೀಕರ ಪುತ್ರ ಅಭಿ ಶಾ ಕಣ್ಣಿಗೆ ಬಿದ್ದಿದೆ. ಈ ಟಿಕೆಟ್‌ ಅನ್ನು ಸ್ಕ್ರಾಚ್‌ ಕೂಡ ಮಾಡದೆ ಲಿಯಾ ಹಾಗೇ ಎಸೆದಿದ್ದಾರೆ ಎಂದು ಅಭಿ ಟಿವಿಯೊಂದರಲ್ಲಿ ಹೇಳಿಕೊಂಡಿದ್ದಾರೆ.

5 ಕೋಟಿಗೂ ಅಧಿಕ ಮೌಲ್ಯಕ್ಕೆ ಹರಾಜಾಯ್ತು ಪುಟ್ಟ ಮಕ್ಕಳ ವಿಡಿಯೋ

“ಒಂದು ಸಂಜೆ ಕಸದಗುಡ್ಡೆಯಲ್ಲಿ ಬಿದ್ದಿದ್ದ ಟಿಕೆಟ್‌ಗಳನ್ನು ತೆಗೆದು ನೋಡುತ್ತಿದ್ದ ವೇಳೆ, ಈಕೆ ಸಂಖ್ಯೆಯನ್ನು ಸ್ಕ್ರಾಚ್‌ ಮಾಡಿ ನೋಡಿಲ್ಲ ಎಂಬುದನ್ನು ತಿಳಿದುಕೊಂಡೆ. ನಾನು ಆ ಸಂಖ್ಯೆಯನ್ನು ಸ್ಕ್ರಾಚ್‌ ಮಾಡಿ ನೋಡಿದಾಗ ಆ ಸಂಖ್ಯೆಗೆ $1 ದಶಲಕ್ಷ ಬಂಪರ್‌ ಬಹುಮಾನ ಖುಲಾಯಿಸಿತ್ತು” ಎಂದು ಅಭಿ ಶಾ ಟಿವಿ ವಾಹಿನಿಯೊಂದಕ್ಕೆ ತಿಳಿಸಿದ್ದಾರೆ.

ಆ ಸಂಖ್ಯೆಯನ್ನು ಖಾತ್ರಿ ಪಡಿಸಿಕೊಂಡ ಶಾ, ಆ ಟಿಕೆಟ್‌ ಅನ್ನು ಲಿಯಾಗೆ ಹಸ್ತಾಂತರಿಸಲು ಆಕೆಯ ಆಫೀಸ್‌ಗೆ ಹೊರಟಿದ್ದಾರೆ. ಈ ವಿಚಾರ ತಿಳಿದು ಅಚ್ಚರಿಗೀಡಾಗಿ ಆನಂದಭಾಷ್ಪ ಹರಿಸಿದ ಲಿಯಾ, ಶಾನ ಕುಟುಂಬಕ್ಕೆ ತನ್ನ ಬಹುಮಾನದ ದೊಡ್ಡ ಪಾಲೊಂದನ್ನು ಕೊಟ್ಟು ಅವರ ಪ್ರಾಮಾಣಿಕತೆಯನ್ನು ಸತ್ಕರಿಸಿದ್ದಾರೆ.

ರಾಜ್ಯ ಲಾಟರಿ ಕಮಿಷನ್‌ನಿಂದ ಸಾಮಾನ್ಯವಾಗಿ ಲಾಟರಿ ಅಂಗಡಿಗಳಿಗೆ $10,000 ಲಾಟರಿ ಕಮಿಷನ್ ರೂಪದಲ್ಲಿ ಸಿಗುತ್ತದೆ. ಆದರೆ ಲಿಯಾ ಅಭಿ ಶಾನ ಪ್ರಾಮಾಣಿಕತೆಗೆ ಇದಕ್ಕಿಂತ ದೊಡ್ಡ ಮೊತ್ತವನ್ನೇ ಕೊಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...