alex Certify 5 ಕೋಟಿಗೂ ಅಧಿಕ ಮೌಲ್ಯಕ್ಕೆ ಹರಾಜಾಯ್ತು ಪುಟ್ಟ ಮಕ್ಕಳ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

5 ಕೋಟಿಗೂ ಅಧಿಕ ಮೌಲ್ಯಕ್ಕೆ ಹರಾಜಾಯ್ತು ಪುಟ್ಟ ಮಕ್ಕಳ ವಿಡಿಯೋ

ಇಂಟರ್ನೆಟ್​ ಇತಿಹಾಸದಲ್ಲೇ ಭಾರೀ ವೈರಲ್​ ಆದ ವಿಡಿಯೋವೊಂದು ಆರು ಅಂಕಿಗಳ ಮೊತ್ತಕ್ಕೆ ಹರಾಜಾಗಿದೆ. 2000 ದಶಕದ ವೈರಲ್​ ವಿಡಿಯೋಗಳಲ್ಲಿ ಒಂದಾದ ಈ ವಿಡಿಯೋವನ್ನ ಡಿಜಿಟಲ್​ ಕಲೆಕ್ಟರ್​ ನಾನ್​ ಫಂಗಿಬಲ್​​ ಟೋಕನ್ಸ್ ಖರೀದಿ ಮಾಡಿದೆ.

ʼಚಾರ್ಲಿ ಬಿಟ್​ ಮೈ ಫಿಂಗರ್ʼ​​ ಎಂಬ ವೈರಲ್​ ವಿಡಿಯೋದ 14ನೇ ವಾರ್ಷಿಕೋತ್ಸವದ ಪ್ರಯುಕ್ತ ವಿಡಿಯೋ ಬರೋಬ್ಬರಿ 761,000 ಡಾಲರ್‌ ಗೆ ಹರಾಜಾಗಿದೆ.

2007ರಲ್ಲಿ ಪೋಸ್ಟ್ ಆದ ಈ 55 ಸೆಕೆಂಡ್​ಗಳ ಯುಟ್ಯೂಬ್ ವಿಡಿಯೋದಲ್ಲಿ ಬ್ರಿಟಿನ್​ ಬಾಲಕ ಹ್ಯಾರಿ ಹಾಗೂ ಅತನ ಪುಟ್ಟ ತಮ್ಮ ಚಾರ್ಲಿಯ ಮುದ್ದಾದ ದೃಶ್ಯವಿದೆ. ಹ್ಯಾರಿ ತನ್ನ ಕೈ ಬೆರಳುಗಳನ್ನ ಚಾರ್ಲಿಯ ಬಾಯಲ್ಲಿ ಇಡುತ್ತಾನೆ. ಚಾರ್ಲಿ ಆತನ ಕೈ ಕಚ್ಚುತ್ತಿದ್ದಂತೆಯೇ ಚಾರ್ಲಿ ಬಿಟ್​ ಮೈ ಫಿಂಗರ್​, ಚಾರ್ಲಿ ನನಗೆ ನೋವಾಗುತ್ತಿದೆ ಎಂದು ಹೇಳುವ ದೃಶ್ಯ ತುಂಬಾನೇ ಮುದ್ದಾಗಿದೆ.

883 ಮಿಲಿಯನ್​ಗೂ ಅಧಿಕ ವೀವ್ಸ್ ಸಂಪಾದಿಸಿದ ಬಳಿಕ ಈ ವಿಡಿಯೋ ಯುಟ್ಯೂಬ್​ನ ಪ್ರಸಿದ್ಧ ವಿಡಿಯೋಗಳ ಪಟ್ಟಿಯಲ್ಲಿ ಸ್ಥಾನ ಪಡೆಯಿತು. ಇದೀಗ ಈ ಹರಾಜು ಪ್ರಕ್ರಿಯೆ ಬಳಿಕ ಈ ವಿಡಿಯೋ ಯುಟ್ಯೂಬ್​ನಿಂದ ಡಿಲೀಟ್​ ಆಗಲಿದೆ. ಆದರೆ ಈಗಾಗಲೇ ಈ ವಿಡಿಯೋ ವಿವಿಧ ಸೋಶಿಯಲ್​ ಮೀಡಿಯಾ ವೇದಿಕೆಗಳಲ್ಲಿ ಹಂಚಲ್ಪಟ್ಟಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...