alex Certify ಮಗನಿಗೆ ಬದನೆಕಾಯಿ ಗೊಜ್ಜು ತಿನಿಸಿದ ಪಕ್ಕದ ಮನೆಯಾಕೆಯ ಮೇಲೆ ಉರಿದುಬಿದ್ದ ತಾಯಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಗನಿಗೆ ಬದನೆಕಾಯಿ ಗೊಜ್ಜು ತಿನಿಸಿದ ಪಕ್ಕದ ಮನೆಯಾಕೆಯ ಮೇಲೆ ಉರಿದುಬಿದ್ದ ತಾಯಿ

ಪುಟಾಣಿ ಮಗುವೊಂದರ ತಾಯಿಯೊಬ್ಬರು ತನ್ನ ಮಗನಿಗೆ ಬಲವಂತವಾಗಿ ಬದನೆಕಾಯಿ ಗೊಜ್ಜು ತಿನ್ನಿಸಿದರು ಎಂದು ನೆರೆಹೊರೆಯ ಮನೆಯಾಕೆಯ ಮೇಲೆ ಸಿಟ್ಟಾಗಿದ್ದಾರೆ.

ಲಿಂಡಾ (ಹೆಸರು ಬದಲಿಸಲಾಗಿದೆ) ಎಂಬಾಕೆ ತನ್ನ 7 ವರ್ಷದ ಮಗನನ್ನು ಕೆಲಹೊತ್ತು ನೋಡಿಕೊಳ್ಳಲು ಪಕ್ಕದ ಮನೆಯಾಕೆಗೆ ತಿಳಿಸಿ ಮುಖ್ಯವಾದ ಮೀಟಿಂಗ್‌ ಒಂದರಲ್ಲಿ ಭಾಗಿಯಾಗಲು ತೆರಳಿದ್ದಾರೆ. ಈ ವೇಳೆ ತನ್ನ ಮಗನಿಗೆಂದು ಡಬ್ಬವೊಂದರಲ್ಲಿ ಸ್ಯಾಂಡ್‌ವಿಚ್‌ ಹಾಗೂ ಆರೆಂಜ್ ಜ್ಯೂಸ್ ತುಂಬಿಕೊಟ್ಟ ಲಿಂಡಾ, ಪಕ್ಕದ ಮನೆಯಾಕೆಗೆ ಅದನ್ನು ಕೊಟ್ಟಿದ್ದಾರೆ.

ತನ್ನ ಮಗನಿಗೆ ಬಾದಾಮಿ ಎಂದರೆ ಅಲರ್ಜಿ ಇದ್ದು ಆತನಿಗೆ ಯಾವುದೇ ಸಿಹಿತಿನಿಸುಗಳನ್ನು ಕೊಡದಿರಲು ಲಿಂಡಾ ಪಕ್ಕದ ಮನೆಯಾಕೆಗೆ ಕೋರಿಕೊಂಡಿದ್ದರು.

ಪಕ್ಕದ ಮನೆಯಾಕೆ ತನಗೆಂದು ರೋಟಿ ಹಾಗೂ ಬದನೆಕಾಯಿ ಗೊಜ್ಜು ಮಾಡಿಕೊಳ್ಳುತ್ತಲೇ, ತಾನೂ ಸಹ ಅದರ ರುಚಿ ನೋಡುತ್ತೇನೆಂದು ಆ ಬಾಲಕ ಆಕೆಯಲ್ಲಿ ಕೇಳಿಕೊಂಡಿದ್ದಾನೆ. ಬದನೆಕಾಯಿ ಗೊಜ್ಜಿನ ರುಚಿ ಇಷ್ಟಪಟ್ಟ ಬಾಲಕ ಎರಡು ರೋಟಿ ತಿಂದಿದ್ದಾನೆ. ತನ್ನ ಅಮ್ಮ ಕೊಟ್ಟಿದ್ದ ಸ್ಯಾಂಡ್‌ವಿಚ್‌ಅನ್ನು ಹಾಗೆಯೇ ಬಿಟ್ಟುಬಿಟ್ಟಿದ್ದಾನೆ ಬಾಲಕ.

ಕಣ್ಣಂಚನ್ನು ತೇವಗೊಳಿಸುತ್ತೆ ಅಗಲಿದ ತಾಯಿಗಾಗಿ ಪುತ್ರ ಸಲ್ಲಿಸಿದ ಭಾವಪೂರ್ಣ ನಮನ

ಬಳಿಕ ತನ್ನ ಮಗನನ್ನು ಬಂದು ಲಿಂಡಾ ತನ್ನ ಮನೆಗೆ ಕರೆದೊಯ್ದಿದ್ದಾರೆ. ತನ್ನ ಮಗ ಹೀಗೆ ಅನ್ಯ ಆಹಾರವೊಂದನ್ನು ಸೇವಿಸಿದ್ದಾನೆ ಎಂದು ತಿಳಿದ ಲಿಂಡಾ ತನ್ನ ಪಕ್ಕದ ಮನೆಯಾಕೆಯ ಬಳಿ ತೆರಳಿ, “ನನ್ನ ಮಗನಿಗೆ ಏನೇನೋ ಆಹಾರ ತಿನ್ನಿಸಲು ನಿನಗೆ ಹಕ್ಕಿಲ್ಲ” ಎಂದಿದ್ದು, “ದೇವರಿಗೇ ಗೊತ್ತು ಅದು ಎಂಥ ಆಹಾರವೋ ಏನೋ ಎಂದು” ಎಂದಿದ್ದಾರೆ.

“ತನ್ನ ಮಗನನ್ನು ಸಂಪೂರ್ಣ ಶಾಖಾಹಾರಿಯನ್ನಾಗಿ ಬದಲಿಸಲು ನೋಡುತ್ತಿರುವುದಾಗಿ ತಿಳಿಸಿದ ಲಿಂಡಾ, ನಾನು ಆಕೆಯ ಈ ಯತ್ನಕ್ಕೆ ಕಲ್ಲು ಹಾಕಿದ್ದಾಗಿ ಆಪಾದನೆ ಮಾಡುತ್ತಿದ್ದಾರೆ” ಎಂದು ಪಕ್ಕದ ಮನೆಯಾಕೆ ತನ್ನ ವರ್ಶನ್ ಹೇಳಿದ್ದಾರೆ.

“ನಾನು ಆ ಬಾಲಕನಿಗೆ ಕೊಟ್ಟಿದ್ದು ಶಾಖಾಹಾರಿ ಆಹಾರವಾಗಿದ್ದು, ಅದು ಸಂಪೂರ್ಣ ಆರೋಗ್ಯವಾಗಿದ್ದಲ್ಲದೇ, ರುಚಿಯಾಗೂ ಇತ್ತು. ಇಲ್ಲವಾದಲ್ಲಿ ಬಾಲಕ ಹಾಗೆ ತಿನ್ನಲು ಸಾಧ್ಯವಿರಲಿಲ್ಲ. ಆದರೂ ಸಹ ಲಿಂಡಾ ನನ್ನ ಮಾತು ಕೇಳುವ ಮೂಡ್‌ನಲ್ಲಿ ಇಲ್ಲ” ಎಂದು ಪಕ್ಕದ ಮನೆಯಾಕೆ ಮುಂದುವರೆದು ತಿಳಿಸಿದ್ದಾರೆ.

ಇವರಿಬ್ಬರ ಈ ಜಗಳ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದ್ದು, ರೆಡ್ಡಿಟ್‌ನ ಈ ಪೋಸ್ಟ್‌ ಅನ್ನು ಕಂಡ ನೆಟ್ಟಿಗರು ಲಿಂಡಾಳ ವರ್ತನೆಯನ್ನು ಪ್ರಶ್ನಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...