ವಿಚಿತ್ರ ಘಟನೆಯೊಂದರಲ್ಲಿ ಮದುವೆಯಾಗಿ 14 ವರ್ಷಗಳ ಬಳಿಕ ಮಿನ್ನೆಸೋಟಾದಲ್ಲಿರುವ ಮಹಿಳೆಗೆ ತಾನು ಇಷ್ಟು ವರ್ಷಗಳ ಕಾಲ ಜೋಪಾನವಾಗಿ ಕಾಯ್ದುಕೊಂಡ ಬಂದ ಮದುವೆ ಉಡುಪು ತನ್ನದಲ್ಲ ಎಂಬ ವಿಚಾರ ಗೊತ್ತಾಗಿದೆ.
ವೆಂಡೀ ಟೇಲರ್ ಹಾಗೂ ಆಕೆಯ 12 ವರ್ಷದ ಮಗಳು ಪ್ರಸಿದ್ಧ ನಾಟಕ ಸರಣಿಯೊಂದರಲ್ಲಿ ಮದುವೆಯ ಸಂಚಿಕೆಯನ್ನ ನೋಡುತ್ತಿದ್ದ ವೇಳೆ ಟೇಲರ್ಗೆ ತನ್ನ ಮದುವೆ ಕೆಲ ವಿಶೇಷ ಅನುಭವವನ್ನ ಮೆಲಕು ಹಾಕುವ ಮನಸ್ಸಾಗಿದೆ. ಕೂಡಲೇ ತಾಯಿ – ಮಗಳು ಮದುವೆ ದಿನ ಟೇಲರ್ ಧರಿಸಿದ್ದ ಉಡುಪನ್ನ ನೋಡೋಕೆ ನಿರ್ಧರಿಸಿದ್ದಾರೆ.
ಒಂದೇ ಒಂದು ಟ್ವೀಟ್ ಮೂಲಕ ಹಲವರ ಮನಗೆದ್ದ ಪಾಪ್ ಗಾಯಕಿ..!
ಈವರೆಗೆ ಟೇಲರ್ ಮದುವೆ ದಿನ ಧರಿಸಿದ್ದ ಉಡುಗೆಯನ್ನ ಫೋಟೋಗಳಲ್ಲಿ ಮಾತ್ರ ಕಂಡಿದ್ದ ಆಕೆಯ ಪುತ್ರಿ ಈ ಬಾರಿ ನಿಜವಾಗಿಯೂ ಆ ಡ್ರೆಸ್ನ್ನು ನೋಡಲು ನಿರ್ಧರಿಸಿದ್ದಳು. ಹೀಗಾಗಿ ತಾಯಿ – ಮಗಳಿಬ್ಬರೂ ಸೇರಿ ಗೌನ್ನ್ನು ಸುರಕ್ಷಿತವಾಗಿ ಇಡಲಾಗಿದ್ದ ಬಾಕ್ಸ್ನ್ನು ತೆರೆದಿದ್ದಾರೆ. ಆದರೆ ಆ ಬಾಕ್ಸ್ನಲ್ಲಿದ್ದ ಡ್ರೆಸ್ ಆಕೆ ಮದುವೆ ದಿನ ಧರಿಸಿದ್ದ ಗೌನ್ ಆಗಿರಲಿಲ್ಲ.
ತನ್ನ 14 ವರ್ಷದ ಹಿಂದಿನ ಗೌನ್ ಹುಡುಕೋಕೆ ಇದೀಗ ಟೇಲರ್ ಫೇಸ್ಬುಕ್ ಮೊರೆ ಹೋಗಿದ್ದಾಳೆ. ಯಾರ ಬಳಿಯಾದರೂ ನನ್ನ ಗೌನ್ ಇದ್ದಲ್ಲಿ ದಯಮಾಡಿ ಹಿಂದಿರುಗಿಸಿ ಎಂದು ಮನವಿ ಮಾಡಿದ್ದಾಳೆ. ಪೋಸ್ಟ್ನಲ್ಲಿ ತನ್ನ ಮದುವೆಯ ಫೋಟೋ ಹಾಗೂ ಈಗ ತನ್ನ ಬಳಿ ಮಿಸ್ ಆಗಿ ಬಂದಿರುವ ಗೌನ್ ಫೋಟೋವನ್ನೂ ಶೇರ್ ಮಾಡಿದ್ದಾಳೆ.
https://www.facebook.com/wendie.taylor/posts/10159364010840962