alex Certify 5 ವರ್ಷದಲ್ಲಿ 150 ಗಿನ್ನಿಸ್ ದಾಖಲೆ ನಿರ್ಮಿಸಿದ ಸರದಾರ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

5 ವರ್ಷದಲ್ಲಿ 150 ಗಿನ್ನಿಸ್ ದಾಖಲೆ ನಿರ್ಮಿಸಿದ ಸರದಾರ…!

ಕೆಲವರಿಗೆ ದಾಖಲೆಗಳನ್ನು ನಿರ್ಮಿಸುವುದೂ ಒಂದು ಸಾಧನೆಯ ಹವ್ಯಾಸ. ಈತ ಕಳೆದ ಐದು ವರ್ಷಗಳಲ್ಲಿ 150 ಗಿನ್ನಿಸ್ ವಿಶ್ವ ದಾಖಲೆ ನಿರ್ಮಿಸಿದ್ದಾನೆ.

ಅಮೆರಿಕಾದ ಇದಾಹೋ ನಗರದಲ್ಲಿನ ಡೇವಿಡ್ ರಶ್ ದಾಖಲೆಗಳ ಸರದಾರ.

ತನ್ನ ಮೂವತ್ತನೇ ವಯಸ್ಸಿನವರೆಗೆ ದಾಖಲೆ ಸೃಷ್ಟಿಸುವ ಯಾವ ಚಿಂತೆಯೂ ಇಲ್ಲದೆ, ಬೇರೆನೋ ಕೆಲಸ ಮಾಡಿಕೊಂಡಿದ್ದ. 30 ರ ನಂತರ ಟಾಸ್ಕ್ ಒಂದನ್ನು ಕಡಿಮೆ ಅವಧಿಯಲ್ಲಿ ಪೂರ್ಣಗೊಳಿಸಿ ದಾಖಲೆ ಸೃಷ್ಟಿಸಿದ್ದ.

ನಂತರದ ದಿನಗಳಲ್ಲಿ ಬೇರೆಯವರ ದಾಖಲೆಗಳನ್ನ ಮುರಿಯುವುದೇ ಈತನ ಕೆಲಸ ಆಯಿತು. ಕೊನೆಗೆ ತನ್ನ ದಾಖಲೆಗಳನ್ನೇ ಕೆಲವೊಮ್ಮೆ ಬದಿಗೆ ಸರಿಸಿ ಹೊಸ ದಾಖಲೆ ಮಾಡಿದ್ದುಂಟು.

ಹೀಗೆ ದಾಖಲೆಯ ಮೇಲೆ ದಾಖಲೆ ಮಾಡುತ್ತಾ 5 ವರ್ಷದಲ್ಲಿ 150 ಗಿನ್ನಿಸ್ ದಾಖಲೆಗಳನ್ನು ಸೃಷ್ಟಿಸಿಬಿಟ್ಟಿದ್ದಾನೆ‌.

ಇದೀಗ ಹೊಸತೊಂದು ದಾಖಲೆ ಬರೆದದ್ದು, ನೀರಿನಲ್ಲಿ ನೆನೆಸಿಟ್ಟಿದ್ದ 92 ಸ್ಪಂಜುಗಳಿಂದ ಒಂದೇ ಸಮನೆ ಮುಖಕ್ಕೆ ಹೊಡೆಸಿಕೊಂಡಿದ್ದಾನೆ. ಇದು ಕೂಡ ಗಿನ್ನಿಸ್ ದಾಖಲೆಯ ಪುಟ ಸೇರಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...