alex Certify Video | ಬೆರಗಾಗಿಸುವಂತಿದೆ ಈ ಆಟೋದಲ್ಲಿ ಬಳಸಲಾಗಿರುವ ತಂತ್ರಜ್ಞಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Video | ಬೆರಗಾಗಿಸುವಂತಿದೆ ಈ ಆಟೋದಲ್ಲಿ ಬಳಸಲಾಗಿರುವ ತಂತ್ರಜ್ಞಾನ

ಭಾರತವು ಬಹುತೇಕ “ಜುಗಾಡ್​” ಪ್ರಿಯರ ದೇಶವಾಗಿದೆ. ಜನರು ಹಲವಾರು ರೀತಿಯಲ್ಲಿ ಬುದ್ಧಿ ಉಪಯೋಗಿಸಿ ವಿಧವಿಧ ರೀತಿಯಲ್ಲಿ ಜುಗಾಡ್​ ಸೃಷ್ಟಿಸುತ್ತಾರೆ.

ಅಂಥದ್ದೇ ಒಂದು ವಿಡಿಯೋ ಈಗ ವೈರಲ್​ ಆಗಿದೆ. ಇದು ಆಟೋರಿಕ್ಷಾಕ್ಕೆ ಸಂಬಂಧಿಸಿದ ವಿಡಿಯೋ ಆಗಿದೆ. ಈ ವಿಡಿಯೋದಲ್ಲಿ ಪ್ರಕಾಶಮಾನವಾದ ಗುಲಾಬಿ ಬಣ್ಣದ ಆಟೋ ರಿಕ್ಷಾದ ಪಕ್ಕದಲ್ಲಿ ವ್ಯಕ್ತಿಯೊಬ್ಬ ನಿಂತಿರುವುದನ್ನು ತೋರಿಸುತ್ತದೆ. ವಾಹನದ ಹೊರಭಾಗವು ಗುಲಾಬಿ ಬಣ್ಣದ್ದಾಗಿದ್ದರೆ, ಒಳಭಾಗವು ಬಿಳಿಯ ಬಣ್ಣ ಹೊಂದಿದೆ.

ಆ ವ್ಯಕ್ತಿ ಆಟೋದೊಳಗೆ ಕೆಲವು ಬಟನ್​ ಅಳವಡಿಸಿದ್ದಾನೆ. ಯಾವುದೋ ಬಟನ್​ ಒತ್ತಿದರೆ ಕನ್ವರ್ಟಿಬಲ್ ಕಾರಿನಲ್ಲಿರುವಂತೆಯೇ ಆಟೋದ ಮೇಲ್ಛಾವಣಿಯು ತೆರೆದುಕೊಳ್ಳುತ್ತದೆ, ಇನ್ನೊಂದು ಬಟನ್​ ಒತ್ತಿದಾಗ ಅದು ಹಿಂದಕ್ಕೆ ಮಡಚಿಕೊಳ್ಳುತ್ತದೆ. ಅದರ ಸೀಟುಗಳೂ ಬೆಲೆಬಾಳುವಂತೆ ಕಾಣುತ್ತಿವೆ. ಅಷ್ಟೇ ಅಲ್ಲದೇ ಆಟೋ-ರಿಕ್ಷಾವು ವಿಶಿಷ್ಟವಾದ ಅಡ್ಡ ದೀಪಗಳನ್ನು ಹೊಂದಿದೆ, ಹಿಂಬದಿಯ ಕನ್ನಡಿಗಳ ಕೆಳಗೆ ಇರಿಸಲಾಗಿದೆ. ಇದನ್ನು ನೋಡಿ ನೆಟ್ಟಿಗರು ಹುಬ್ಬೇರಿಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...