alex Certify ಕೋರ್ಟ್​ ಆವರಣದಲ್ಲೇ ವಕೀಲರ ಕಾಳಗ: ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋರ್ಟ್​ ಆವರಣದಲ್ಲೇ ವಕೀಲರ ಕಾಳಗ: ವಿಡಿಯೋ ವೈರಲ್

ದ್ವಾರಕಾ: ಕೋರ್ಟ್​ ಆವರಣದಲ್ಲಿಯೇ ವಕೀಲರುಗಳ ನಡುವೆ ಭಾರಿ ಕಾದಾಟ ಆಗಿರುವ ವಿಡಿಯೋ ವೈರಲ್​ ಆಗಿದೆ. ದ್ವಾರಕಾ ಜಿಲ್ಲಾ ನ್ಯಾಯಾಲಯದಲ್ಲಿ ಈ ಘಟನೆ ನಡೆದಿದೆ. ನ್ಯಾಯಾಲಯದ ಆವರಣದಲ್ಲಿ ಭದ್ರತಾ ಸಿಬ್ಬಂದಿಯೂ ಇರುವಾಗಲೇ ಈ ಘಟನೆ ನಡೆದಿದೆ.

ಈ ಸಂಬಂಧ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ‘ಡೆಡ್ಲಿ ಲಾ’ ಎಂಬ ಹೆಸರಿನ ಟ್ವಿಟರ್ ಬಳಕೆದಾರರು ವಿಡಿಯೋ ಅಪ್​ಲೋಡ್​ ಮಾಡಿದ್ದಾರೆ.

ವಿಡಿಯೋದಲ್ಲಿ ಇಬ್ಬರು ಜಗಳವಾಡುತ್ತಿರುವಾಗ ಒಬ್ಬ ವಕೀಲ ವ್ಯಕ್ತಿಯೊಬ್ಬನಿಗೆ ಕಪಾಳಮೋಕ್ಷ ಮಾಡುವುದನ್ನು ಕಾಣಬಹುದು. ಇದು ಇನ್ನೊಬ್ಬ ವಕೀಲರು ಒಳಗೆ ನುಗ್ಗಿ ಇನ್ನೊಬ್ಬ ವ್ಯಕ್ತಿಗೆ ಕಪಾಳಮೋಕ್ಷ ಮಾಡುವಾಗ ನೆರೆದವರು ಜಗಳವನ್ನು ನಿಲ್ಲಿಸಲು ಪ್ರಯತ್ನಿಸಿದ್ದಾರೆ. ಆದರೆ ಅವರು ಜಗಳ ನಿಲ್ಲಿಸಲಿಲ್ಲ.

ವಕೀಲರೇ ಈ ರೀತಿ ಹೀನಾಯವಾಗಿ ನಡೆದುಕೊಂಡರೆ ಗತಿಯೇನು ಎಂದು ಹಲವರು ಕಮೆಂಟ್​ ಮೂಲಕ ಪ್ರಶ್ನಿಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...