alex Certify ಬಲೂಚಿಸ್ತಾನ ಕಾರ್ಯಕರ್ತೆ ಕರಿಮಾ ಬಲೂಚ್​ ಕೆನಡಾದಲ್ಲಿ ನಿಗೂಢ ಸಾವು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಲೂಚಿಸ್ತಾನ ಕಾರ್ಯಕರ್ತೆ ಕರಿಮಾ ಬಲೂಚ್​ ಕೆನಡಾದಲ್ಲಿ ನಿಗೂಢ ಸಾವು…!

ಬಲೂಚಿಸ್ತಾನದಲ್ಲಿ ಪಾಕಿಸ್ತಾನದ ದೌರ್ಜನ್ಯದ ಬಗ್ಗೆ ಹಲವಾರು ವರ್ಷಗಳಿಂದ ಧ್ವನಿ ಎತ್ತಿದ್ದ ಬಲೂಚಿಸ್ತಾನ್ ಕಾರ್ಯಕರ್ತೆ ಕರಿಮಾ ಬಲೂಚ್ ಕೆನಡಾದ ಟೊರೊಂಟೊದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ವರದಿಗಳ ಪ್ರಕಾರ 2016ರಲ್ಲಿ ಪಾಕ್​ನಿಂದ ಪಲಾಯನ ಮಾಡಿದ್ದ 35 ವರ್ಷದ ಮಾಜಿ ವಿದ್ಯಾರ್ಥಿ ಮುಖಂಡೆ ಹಾಗೂ ಕಾರ್ಯಕರ್ತೆ ಭಾನುವಾರ ಟೊರೆಂಟೊದಿಂದ ನಾಪತ್ತೆಯಾಗಿದ್ದರು. ಆದರೆ ಟೊರೆಂಟೋದ ನದಿಯೊಂದರಲ್ಲಿ ಈಕೆಯ ಶವ ಪತ್ತೆಯಾಗಿದೆ. ಇದು ಐಎಸ್​ಐ ದಾಳಿ ಇರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

ಕರಿಮಾ ಬಲೂಚ್​ ಪಾಕ್​​ನ ಕೆನಡಾ ನಿರಾಶ್ರಿತೆಯಾಗಿದ್ದು 2016ರಲ್ಲಿ ಪಾಕ್​ ಸರ್ಕಾರದ ವಿರುದ್ಧ ವಿಮರ್ಶೆ ಮಾಡುವ ಮೂಲಕ ಸುದ್ದಿಯಾದರು. ಈ ಹಿಂದೆ ಪಾಕ್​ ಮನೋವಿಜ್ಞಾನ ವಿದ್ಯಾಥಿರ್ನಿಯಾಗಿದ್ದ ಈಕೆ ಬಲೂಚ್​ ವಿದ್ಯಾರ್ಥಿ ಸಂಘಟನೆಯ ಮಾಜಿ ಅಧ್ಯಕ್ಷೆಯೂ ಹೌದು.

2016ರಲ್ಲಿ ಕರಿಮಾ ಬಿಬಿಸಿಯ ಟಾಪ್​ 10 ಪ್ರಭಾವಶಾಲಿ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದರು. ಪಾಕಿಸ್ತಾನದ ವಿರುದ್ಧವಾಗಿ ಕರಿಮಾ ಮಾಡುತ್ತಿದ್ದ ಟೀಕೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ದೊರಕಿತ್ತು . ಪ್ರಧಾನಿಗೆ ರಕ್ಷಾ ಬಂಧನದ ಶುಭ ಕೋರಿದ ಬಳಿಕ ಭಾರತೀಯರಿಗೂ ಕರಿಮಾ ಚಿರಪರಿಚಿತರಾಗಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...