alex Certify ಶಾರ್ಕ್​ – ಮೊಸಳೆ ಮುಖಾಮುಖಿ..! ಮುಂದೇನಾಯ್ತು ನೋಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾರ್ಕ್​ – ಮೊಸಳೆ ಮುಖಾಮುಖಿ..! ಮುಂದೇನಾಯ್ತು ನೋಡಿ

ಬುಲ್​ ಶಾರ್ಕ್​ವೊಂದು ದೈತ್ಯಾಕಾರದ ಮೊಸಳೆಗೆ ಮುಖಾಮುಖಿಯಾದ ಭಯಾನಕ ದೃಶ್ಯ ಡ್ರೋಣ್​ ಕ್ಯಾಮರಾದಲ್ಲಿ ಸೆರೆಯಾಗಿದೆ. ಆಸ್ಟ್ರೇಲಿಯಾದ ಚೆಲ್ಸಿಯಾ ಹಾಗೂ ಬ್ರೈಸ್​ ಕುನನೂರ್ರಾದ ಇವಾನ್​ ಹೋ ಕ್ರಾಸಿಂಗ್​ ಬಳಿ ಮೀನುಗಾರಿಕೆ ನಡೆಸುತ್ತಿದ್ದಾಗ ಡ್ರೋಣ್​ ಕ್ಯಾಮರಾದಲ್ಲಿ ಈ ದೃಶ್ಯ ಸೆರೆಯಾಗಿದೆ.

ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿರುವ ಈ ಫೂಟೇಜ್​​ನಲ್ಲಿ ಎರಡು ಭಯಾನಕ ಸಮುದ್ರವಾಸಿಗಳು ಮುಖಾಮುಖಿಯಾಗೋದನ್ನ ನೋಡಬಹುದಾಗಿದೆ. ಸುಮಾರು 17 ಅಡಿ ಉದ್ದದ ಮೊಸಳೆ ಮುಖಾಮುಖಿಯಾಗ್ತಿದ್ದಂತೆ ಶಾರ್ಕ್​ ತನ್ನ ದಿಕ್ಕನ್ನ ಬದಲಿಸಿ ಅಲ್ಲಿಂದ ಜಾಗ ಖಾಲಿ ಮಾಡಿದೆ.

ಈ ವಿಡಿಯೋವನ್ನ ಯೂ ಟ್ಯೂಬ್​ನಲ್ಲಿ ಪೋಸ್ಟ್ ಮಾಡಲಾಗಿದ್ದು ಲಕ್ಷಕ್ಕೂ ಹೆಚ್ಚು ವೀವ್ಸ್​ಗಳನ್ನ ಪಡೆದಿದೆ. ಇನ್ನಿತರ ಸಾಮಾಜಿಕ ಜಾಲತಾಣಗಳ ವೇದಿಕೆಗಳಲ್ಲೂ ಈ ವಿಡಿಯೋವನ್ನ ನೆಟ್ಟಿಗರು ಹಂಚಿಕೊಂಡಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...