alex Certify ಪ್ರಧಾನಿ ಇಮ್ರಾನ್ ಹೇಳಿಕೆಗೆ ಮ್ಯೂಸಿಕಲ್ ಟಚ್‌ ಕೊಟ್ಟ ಪಾಕ್ ಗಾಯಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಧಾನಿ ಇಮ್ರಾನ್ ಹೇಳಿಕೆಗೆ ಮ್ಯೂಸಿಕಲ್ ಟಚ್‌ ಕೊಟ್ಟ ಪಾಕ್ ಗಾಯಕ

ಪಾಕಿಸ್ತಾನ ಪ್ರಧಾನ ಮಂತ್ರಿ ಇಮ್ರಾನ್ ಖಾನ್‌ರ ’ಆಪ್‌ ನೆ ಘಬ್ರಾನಾ ನಹೀ ಹೈ’ ಭಾಷಣ ಸಖತ್‌ ವೈರಲ್ ಆಗಿದೆ. ಪಾಕ್‌ ಕಲಾವಿದ ಸಾದ್ ಅಲಾವಿ ಈ ಭಾಷಣದ ಲೈನ್‌ ಒಂದಕ್ಕೆ ಮ್ಯೂಸಿಕಲ್ ರ‍್ಯಾಪ್ ಟಚ್‌ ಕೊಟ್ಟಿದ್ದಾರೆ.

ಕಳೆದ ವರ್ಷದ ಮಾರ್ಚ್‌‌ನಲ್ಲಿ ಕೊರೋನಾ ವೈರಸ್ ಸಾಂಕ್ರಾಮಿಕದ ಕುರಿತು ಮಾತನಾಡಿದ ಖಾನ್, “ನೀವು ಹೆದರುವ ಅಗತ್ಯವಿಲ್ಲ. ಬದುಕು ಹಾಗೂ ಸಾವುಗಳು ಅಲ್ಲಾಹುವಿನ ಕೈಯಲ್ಲಿವೆ ಎಂದು ನಾವು ನಂಬಿದ್ದೇವೆ” ಎಂದು ಹೇಳಿದ್ದರು.

ಸಂಸ್ಕೃತ ಶ್ಲೋಕದ ಮೂಲಕ ಅಳಿಯನಿಗೆ ಹರಸಿದ ಉತ್ತರಾಖಂಡ ಸಿಎಂ ಅತ್ತೆ

ಪ್ರಧಾನಿಯ ಈ ಹೇಳಿಕೆಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಇದೀಗ ಪಾಕಿಸ್ತಾನದಲ್ಲಿ ಬೆಲೆ ಏರಿಕೆಯ ವಿಷಯವನ್ನು ಇಟ್ಟುಕೊಂಡು ಖಾನ್‌ರ ಇದೇ ಹೇಳಿಕೆಯನ್ನು ಕ್ಯಾಚಿ ಹಾಡಾಗಿ ಮಾಡಿಕೊಂಡು ಸಖತ್‌ ವ್ಯಂಗ್ಯ ಮಾಡಿದ್ದಾರೆ ಸಾದ್‌.

ಔಷಧಗಳು, ಶಾಲಾ ಶುಲ್ಕಗಳು, ದಿನಸಿ ಪದಾರ್ಥಗಳ ಬೆಲೆ ಏರಿಕೆ ಹಾಗೂ ನಾಗರಿಕರಿಂದ ತೆರಿಗೆ ಪಾವತಿಯ ವಿಷಯಗಳನ್ನು ತಮ್ಮ ಹಾಡಿನಲ್ಲಿ ಇಟ್ಟುಕೊಂಡು ಸಖತ್‌ ಫನ್ನಿಯಾಗಿ ಹಾಡು ರಚಿಸಿರುವ ಸಾದ್, ಈ ಮೂಲಕ ಬಹಳ ಪ್ರಸ್ತುತವಾದ ಸಂದೇಶ ರವಾನೆ ಮಾಡಿದ್ದಾರೆ.

PRIME MINISTER IMRAN KHAN SAY'S AAP NE GHABRANA NAHI HAI – SAAD ALAVI SONG

PRIME MINISTER IMRAN KHAN SAY'S AAP NE GHABRANA NAHI HAI – SAAD ALAVI SONG

Posted by Saad Alavi – Page on Tuesday, March 9, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...