alex Certify ಅಬ್ಬಬ್ಬಾ..! ಈ ಬಿಯರ್ ಬೆಲೆ ಕೇಳಿದ್ರೆ ನೀವು ದಂಗಾಗಿ ಹೋಗ್ತೀರಾ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಬ್ಬಬ್ಬಾ..! ಈ ಬಿಯರ್ ಬೆಲೆ ಕೇಳಿದ್ರೆ ನೀವು ದಂಗಾಗಿ ಹೋಗ್ತೀರಾ..!

ಕೆಲವೊಂದು ಹೋಟೆಲ್​ಗಳು ಗ್ರಾಹಕರಿಗೆ ವಿಚಿತ್ರವಾಗಿ ಬಿಲ್​​ಗಳನ್ನ ನೀಡುವ ಮೂಲಕ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗ್ತಾನೇ ಇರ್ತಾವೆ.

ಬಾಲಿವುಡ್​ ನಟ ರಾಹುಲ್​ ಬೋಸ್​ರಿಗೆ ಹೋಟೆಲ್​ ವೊಂದು ಕೇವಲ 2 ಬಾಳೆಹಣ್ಣಿಗೆ 442 ರೂಪಾಯಿ ಚಾರ್ಜ್​ ವಿಧಿಸುವ ಮೂಲಕ ಸುದ್ದಿಯಾಗಿತ್ತು. ಅದೇ ರೀತಿ ಲೇಖಕ ಕಾರ್ತಿಕ್​ ಧಾರ್​ 2 ಬೇಯಿಸಿದ ಮೊಟ್ಟೆಗೆ ಬರೋಬ್ಬರಿ 1700 ರೂಪಾಯಿ ಪಾವತಿ ಮಾಡಿದ್ದರು. ಇದೀಗ ಇದೇ ರೀತಿಯ ದುಬಾರಿ ಬಿಲ್​ ಒಂದು ನೆಟ್ಟಿಗರ ಹುಬ್ಬೇರಿಸಿದೆ.

ಆಸ್ಟ್ರೇಲಿಯಾದ ಕ್ರಿಕೆಟ್​ ವರದಿಗಾರ ಪೀಟರ್​ ಲ್ಯಾಲೋರ್​ ಮ್ಯಾಂಚೆಸ್ಟರ್​​ನ ಹೋಟೆಲ್​​ ಒಂದರಲ್ಲಿ ಬಿಯರ್​​​​​ಗೆ ಬರೋಬ್ಬರಿ 71 ಲಕ್ಷ ರೂಪಾಯಿ ಬಿಲ್​ ಪಾವತಿ ಮಾಡಿದ್ದಾರೆ ಅಂದರೆ ನಿಮಗೆ ನಂಬೋಕೆ ಅಸಾಧ್ಯ ಎನಿಸಬಹುದು..!

ತಮ್ಮ ಸ್ನೇಹಿತರ ಜೊತೆ ಮಲ್ಮಾಷನ್​ ಹೋಟೆಲ್​​ಗೆ ತೆರಳಿದ್ದ ಪೀಟರ್​​ ಬಿಯರ್​​ ಆರ್ಡರ್​​ ಮಾಡಿದ್ದರು. ಇದಕ್ಕಾಗಿ ಪೀಟರ್​ ಕಾರ್ಡ್​ ಮೂಲಕ ಬಿಲ್​ ಪಾವತಿ ಮಾಡಿದ್ದರು. ಈ ವೇಳೆ ಅವರ ಬ್ಯಾಂಕ್​ ಖಾತೆಯಿಂದ ಬರೋಬ್ಬರಿ 99,983.64 ಡಾಲರ್​​ ಡೆಬಿಟ್​ ಆಗಿದೆ. ಇದು ಭಾರತೀಯ ರೂಪಾಯಿ ಲೆಕ್ಕಾಚಾರದಲ್ಲಿ 71 ಲಕ್ಷ 65 ಸಾವಿರದ 31 ರೂಪಾಯಿಗಳಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...