alex Certify ಬರೋಬ್ಬರಿ 98.52 ಕೋಟಿ ರೂ. ಮೌಲ್ಯದ ಬಿಯರ್ ವಶಕ್ಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬರೋಬ್ಬರಿ 98.52 ಕೋಟಿ ರೂ. ಮೌಲ್ಯದ ಬಿಯರ್ ವಶಕ್ಕೆ

ಚಾಮರಾಜನಗರ: 98.52 ಕೋಟಿ ರೂ. ಮೌಲ್ಯದ ಬಿಯರ್ ಹಾಗೂ ಕಚ್ಚಾ ವಸ್ತು ವಶಕ್ಕೆ ಪಡೆಯಲಾಗಿದೆ. ಚಾಮರಾಜನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಮೈಸೂರು ಜಿಲ್ಲೆ ನಂಜನಗೂಡಿನ ಯುಬಿ ತಯಾರಿಕಾ ಘಟಕದಲ್ಲಿ ಬಿಯರ್ ವಶಕ್ಕೆ ಪಡೆಯಲಾಗಿದೆ.

ಜಿಲ್ಲಾ ಚುನಾವಣಾಧಿಕಾರಿ ಕಚೇರಿಗೆ ಬಂದ ಮಾಹಿತಿ ಆಧರಿಸಿ ಚಾಮರಾಜನಗರ ಅಬಕಾರಿ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. 6.3 ಲಕ್ಷ ಬಿಯರ್ ಪೆಟ್ಟಿಗೆ, ಟ್ಯಾಂಕ್ ನಲ್ಲಿದ್ದ 60 ಲಕ್ಷ ಲೀಟರ್ ಬಿಯರ್, ಕಚ್ಚಾ ವಸ್ತು ಸೇರಿ 98.52 ಕೋಟಿ ರೂ. ಮೌಲ್ಯದ ಬಿಯರ್ ವಶಕ್ಕೆ ಪಡೆಯಲಾಗಿದೆ. 7,000 ಬಿಯರ್ ರಟ್ಟಿನ ಪೆಟ್ಟಿಗೆ ವಶಕ್ಕೆ ಪಡೆಯಲಾಗಿದೆ.

ದಾಳಿಯ ವೇಳೆ ಪರಿಶೀಲಿಸಿದಾಗ ಹೆಚ್ಚಿನ ಪ್ರಮಾಣದಲ್ಲಿ ಬಿಯರ್ ದಾಸ್ತಾನು ಮಾಡಿರುವುದು ಕಂಡು ಬಂದಿದೆ. ಘಟಕದಲ್ಲಿ ನಿಗದಿಗಿಂತ ಹೆಚ್ಚುವರಿ ಬಿಯರ್ ತಯಾರಿಸಿ ಕೇರಳಕ್ಕೆ ಸಾಗಾಟ ಮಾಡಲು ಸಂಗ್ರಹಿಸಲಾಗಿತ್ತು ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...