alex Certify ‌ಕೋತಿ ಬಾಲದಂತಹ ಗಡ್ಡದ ಟ್ರೆಂಡ್ ಶುರು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‌ಕೋತಿ ಬಾಲದಂತಹ ಗಡ್ಡದ ಟ್ರೆಂಡ್ ಶುರು….!

ಬಹಳಷ್ಟು ಪುರುಷರಿಗೆ ತಮ್ಮ ಹೇರ್‌ಸ್ಟೈಲ್‌ ಹಾಗೂ ಮುಖದ ಮೇಲಿನ ಗಡ್ಡ/ಮೀಸೆಗಳ ಸ್ಟೈಲ್‌ ಬಗ್ಗೆ ಬಹಳ ಕಾಳಜಿ ಇದ್ದೇ ಇರುತ್ತದೆ. ಆದರೆ ಯುರೋಪ್‌ ನಲ್ಲಿ ಈಗ ಕೋವಿಡ್ ಲಾಕ್‌ಡೌನ್ ಕಾರಣದಿಂದ ಸಲೂನ್‌ಗಳು ಬಾಗಿಲು ಹಾಕಿದ್ದು ಪುರುಷರಿಗೆ ತಮ್ಮಿಚ್ಛೆಯ ಹೇರ್‌ಸ್ಟೈಲ್ ಮಾಡಲು ಅವಕಾಶವಿಲ್ಲದಂತೆ ಆಗಿದೆ.

ಇದೀಗ ಅಂತರ್ಜಾಲದಲ್ಲಿ ವಿಚಿತ್ರ ಟ್ರೆಂಡ್ ಒಂದು ಸದ್ದು ಮಾಡುತ್ತಿದ್ದು, ಕೋತಿ ಬಾಲದ ಆಕೃತಿಯಲ್ಲಿ ತಮ್ಮ ಗಡ್ಡ-ಮೀಸೆಯನ್ನು ಟ್ರಿಮ್ ಮಾಡಿಕೊಂಡಿರುವ ಪುರುಷರ ಫೋಟೋಗಳು ವೈರಲ್ ಆಗಿವೆ.

ಈ ವಿಚಿತ್ರ ಸ್ಟೈಲ್‌ಗೆ ಕ್ಯಾಟ್‌ಟೇಲ್ ಬಿಯರ್ಡ್ ಎಂದೂ ಕರೆಯಲಾಗಿದೆ.

ಸೆಪ್ಟೆಂಬರ್‌ 2019ರಲ್ಲಿ ಅಮೆರಿಕದ ಬೇಸ್‌ಬಾಲ್ ಆಟಗಾರ ಮೈಕ್ ಫಯರ್ಸ್ ತಮ್ಮ ಮಂಕಿ ಟೇಲ್‌ ಗಡ್ಡವನ್ನು ಪಂದ್ಯವೊಂದರ ವೇಳೆ ತೋರಿದಾಗ ಈ ಫ್ಯಾಷನ್‌ ಮೊದಲ ಬಾರಿಗೆ ಸುದ್ದಿ ಮಾಡಿತ್ತು.

ಇದೀಗ #MonkeyTailBeard ಟ್ರಂಡ್ ಆಗುತ್ತಿದ್ದು, ಒಬ್ಬರಿಗಿಂತ ಒಬ್ಬರು ವಿಶೇಷವಾಗಿ ಇದೇ ಥೀಮ್ ಮೇಲೆ ಥರಾವರಿ ಸ್ಟೈಲ್ ಮಾಡಿಕೊಂಡು ಅದರ ಚಿತ್ರಗಳನ್ನು ಪೋಸ್ಟ್ ಮಾಡುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...