alex Certify ಕ್ಯಾನ್ಸರ್‌ನಿಂದ ಬಳಲುತ್ತಿರುವ ಸಹ‌ ಸ್ಪರ್ಧಿಗೆ ರೇಸ್ ಪೂರೈಸಲು ನೆರವಾದ ವಿದ್ಯಾರ್ಥಿನಿಯರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ಯಾನ್ಸರ್‌ನಿಂದ ಬಳಲುತ್ತಿರುವ ಸಹ‌ ಸ್ಪರ್ಧಿಗೆ ರೇಸ್ ಪೂರೈಸಲು ನೆರವಾದ ವಿದ್ಯಾರ್ಥಿನಿಯರು

ಕ್ಯಾನ್ಸರ್‌ನಿಂದ ಚೇತರಿಸಿಕೊಳ್ಳುತ್ತಿರುವ ತಮ್ಮ ಸಹಪಾಠಿಯನ್ನು ರೇಸ್ ಪೂರ್ಣಗೊಳಿಸಲು ಮೂವರು ಶಾಲಾ ಬಾಲಕಿಯರು ಸಹಾಯ ಮಾಡಿದ ವಿಡಿಯೋವೊಂದು ನೆಟ್ಟಿಗರ ಮನಗೆದ್ದಿದೆ.

ನ್ಯೂಯಾರ್ಕ್ ಕ್ಯಾಪಿಟಲ್ ಜಿಲ್ಲೆಯಲ್ಲಿ ಆಯೋಜಿಸಿದ್ದ ಟ್ರಾಕ್‌-ಮತ್ತು-ಫೀಲ್ಡ್‌ ಕೂಟವೊಂದರ ವೇಳೆ ಈ ಹೃದಯಸ್ಪರ್ಶಿ ಘಟನೆ ಜರುಗಿದೆ.

ಬಿಗ್‌ ನ್ಯೂಸ್: GST ಮುಕ್ತವಾಗಲಿದೆ ಕೊರೊನಾ ಔಷಧಿ….? ಶುಕ್ರವಾರದ ಸಭೆಯಲ್ಲಿ ಅಂತಿಮ ನಿರ್ಧಾರ

ಮೂವರು ಶಾಲಾ ಬಾಲಕಿಯರು ರೇಸ್ ಟ್ರ‍್ಯಾಕ್‌ನಲ್ಲಿ ಓಡುತ್ತಿದ್ದ ವೇಳೆ, ಅದೇ ರೇಸ್‌ನಲ್ಲಿ ಭಾಗಿಯಾಗಿ ಓಡಲು ಪರದಾಡುತ್ತಿದ್ದ ತಮ್ಮ ಸಹಪಾಠಿ ಯೆವಾ ಕ್ಲಿಂಗ್‌ಬೀಲ್‌ಳ ಕೈ ಹಿಡಿದುಕೊಂಡು ಆಕೆಯೊಂದಿಗೆ ನಡೆದುಕೊಂಡೇ ರೇಸ್‌ ಪೂರ್ಣಗೊಳಿಸಲು ನೆರವಾಗಿದ್ದಾರೆ.

ನೆಟ್ಟಿಗನ ಕುಚೇಷ್ಟೆ ಪ್ರಶ್ನೆಗೆ ಮುಂಬೈ ಪೊಲೀಸರಿಂದ ಖಡಕ್ ಪ್ರತಿಕ್ರಿಯೆ

ಶೆನೆನ್‌ಡೆಹೋವಾ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಫಿನಿಶಿಂಗ್ ಲೈನ್ ಕ್ರಾಸ್ ಮಾಡುತ್ತಲೇ ಅಲ್ಲಿ ನೆರೆದಿದ್ದ ಪ್ರೇಕ್ಷಕರು ಹಾಗೂ ದೊಡ್ಡ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿಂದ ಭಾರೀ ಮೆಚ್ಚುಗೆಯ ಕರತಾಡನ ಮೂಡಿ ಬಂದಿದ್ದಲ್ಲದೇ, ಈ ವಿದ್ಯಾರ್ಥಿನಿಯರ ಸ್ಪೂರ್ತಿಯುತ ನಡೆಗೆ, ಅವರ ಹೆಸರುಗಳನ್ನು ಜೋರಾಗಿ ಕೂಗಿ ಪ್ರೋತ್ಸಾಹಿಸಲಾಗಿದೆ.

ಈ ವಿಡಿಯೋವನ್ನು ಅಮೆರಿಕ ಬ್ಯಾಸ್ಕೆಟ್‌ಬಾಲ್‌ನ ಮಾಜಿ ಆಟಗಾರ ರೆಕ್ಸ್ ಚಾಪ್‌ಮನ್ ಶೇರ್‌ ಮಾಡಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...