alex Certify ನೆಟ್ಟಿಗನ ಕುಚೇಷ್ಟೆ ಪ್ರಶ್ನೆಗೆ ಮುಂಬೈ ಪೊಲೀಸರಿಂದ ಖಡಕ್ ಪ್ರತಿಕ್ರಿಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೆಟ್ಟಿಗನ ಕುಚೇಷ್ಟೆ ಪ್ರಶ್ನೆಗೆ ಮುಂಬೈ ಪೊಲೀಸರಿಂದ ಖಡಕ್ ಪ್ರತಿಕ್ರಿಯೆ

ಮುಂಬೈ ಪೊಲೀಸ್ ತನ್ನ ಸಾಮಾಜಿಕ ಜಾಲತಾಣಗಳ ಹ್ಯಾಂಡಲ್ ಮೂಲಕ ಸಾರ್ವಜನಿಕರ ಜೊತೆಗೆ ಎಂಗೇಜ್ ಆಗಿದ್ದುಕೊಂಡು ಅವರಲ್ಲಿ ಕಾನೂನು ಪಾಲನೆ ಕುರಿತಂತೆ ಜಾಗೃತಿ ಮೂಡಿಸಲೆಂದು ಆಕರ್ಷಕ ಕಂಟೆಂಟ್‌ಗಳನ್ನು ಆಗಾಗ್ಗೆ ಪೋಸ್ಟ್ ಮಾಡುತ್ತಲೇ ಇರುತ್ತದೆ.

ಟ್ವಿಟರ್‌‌ ಹ್ಯಾಂಡಲ್ ಮೂಲಕ ಸಾರ್ವಜನಿಕರೊಂದಿಗೆ ಟಚ್‌ನಲ್ಲಿರುವ ಮುಂಬೈ ಪೊಲೀಸ್‌ ಆಗಾಗ ನೆಟ್ಟಿಗರೊಂದಿಗೆ ಸಂವಹವನ್ನೂ ನಡೆಸುತ್ತದೆ. ಇತ್ತೀಚೆಗೆ ಟ್ಟಿಟ್ಟಿಗರೊಬ್ಬರಿಗೆ ತನ್ನ ವಾಕ್ಚಾತುರ್ಯದ ಬಿಸಿ ಮುಟ್ಟಿಸಿದೆ ಮುಂಬೈ ಪೊಲೀಸ್.

ಗರ್ಲ್​‌ ಫ್ರೆಂಡ್​ ಆಸೆ ತೀರಿಸಲು ಹೋಗಿ ಆಸ್ಪತ್ರೆ ಸೇರಿದ ಯುವಕ..!

“ಭಾನುವಾರದ ಬಿಸಿಲು ಜೋರಾಗಿದೆ. ಮನೆಯೊಳಗೇ ಇರಲು ಸೂಕ್ತ ವಾತಾವರಣ. #StayIndoor #TakingOnCorona” ಎಂದು ಮುಂಬೈ ಪೊಲೀಸ್‌ ತನ್ನ ಪೋಸ್ಟ್ ಮೂಲಕ ತಿಳಿಸಿದೆ.

ಇದಕ್ಕೆ ಪ್ರತಿಕ್ರಿಯಿಸಿದ ಸನ್ನಿ ಪಾಂಡೆ ಹೆಸರಿನ ಟ್ವಿಟ್ಟಿಗರೊಬ್ಬರು,”ಸರ್, ನನ್ನ ಹೆಸರು ಸನ್ನಿ. ನಾನು ಹೊರಗೆ ಹೋಗಬಹುದೇ…?” ಎಂದಿದ್ದಾರೆ.

ಬಾಬಾ ರಾಮ್​ದೇವ್ ‘ಈಡಿಯಟ್​’ ಎಂದ ನಿರ್ಮಾಪಕ ಹನ್ಸಲ್​ ಮೆಹ್ತಾ..!

ಸನ್ನಿಯ ಪ್ರಶ್ನೆಗೆ ಸಖತ್‌ ಉತ್ತರ ಕೊಟ್ಟ ಮುಂಬೈ ಪೊಲೀಸ್, “ಸರ್‌, ನೀವು ನಿಜಕ್ಕೂ ಸೌರಮಂಡಲದ ನಡುವಿನ ನಕ್ಷತ್ರವೇ ಆಗಿದ್ದು, ನಿಮ್ಮ ಸುತ್ತಲೂ ಭೂಮಿ ಹಾಗೂ ಸೌರಮಂಡಲದ ಇತರ ಅಂಗಗಳು ಸಂಚರಿಲಿಸುತ್ತಿದ್ದಲ್ಲಿ, ನಿಮ್ಮ ಮೇಲಿರುವ ಹೊಣೆಗಾರಿಕೆ ಏನೆಂದು ನಿಮಗೆ ಅರಿವಿದೆ ಎಂದು ಭಾವಿಸುತ್ತೇವೆ…! ದಯವಿಟ್ಟು ನಿಮ್ಮನ್ನು ನೀವು ವೈರಸ್‌ಗೆ ತೆರೆದುಕೊಳ್ಳುವ ಮೂಲಕ ರಾಜಿ ಮಾಡಿಕೊಳ್ಳಬೇಡಿ…! #SunshineOfSafety ಆಗಿರಿ” ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...