alex Certify ರಾತ್ರಿ ಬೆಳಗಾಗೋದ್ರಲ್ಲಿ ಫುಟ್​ಪಾತ್​ ಮಂಗಮಾಯ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾತ್ರಿ ಬೆಳಗಾಗೋದ್ರಲ್ಲಿ ಫುಟ್​ಪಾತ್​ ಮಂಗಮಾಯ…!

ನಮ್ಮ ದೇಶದಲ್ಲಿ ಕೆಲ ಮಂದಿ ಮಾಡುವ ಕಾರ್ಯಗಳು ವಿಶ್ವ ಮಟ್ಟದಲ್ಲಿ ದೇಶದ ಗೌರವಕ್ಕೆ ಧಕ್ಕೆ ತರುವಂತೆ ಇರುತ್ತೆ. ಮಾಲಿನ್ಯ ಸೇರಿದಂತೆ ವಿವಿಧ ವಿಭಾಗಗಳಲ್ಲಿ ದೇಶದಲ್ಲಿ ಅನೇಕ ಕೃತ್ಯಗಳು ನಡೆದಿವೆ. ಹಾಗಂತ ಬೇರೆ ದೇಶಗಳಲ್ಲಿ ಏನೂ ನಡೆಯೋದೇ ಇಲ್ಲ ಎಂದೇನಲ್ಲ. ಇಂಗ್ಲೆಂಡ್​ನ ರಸ್ತೆಯೊಂದರಲ್ಲಿ ಯಾರೋ ದುಷ್ಕರ್ಮಿಗಳು ಫುಟ್​ಪಾತ್​ನ್ನೇ ಕದ್ದುಕೊಂಡು ಹೋಗಿದ್ದಾರೆ..!

ಇಂಗ್ಲೆಂಡ್​ನ ವೆಸ್ಟ್​ ಸುಸೆಕ್ಸ್ ಎಂಬಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಫುಟ್​ಪಾತ್​ ಮೇಲೆ ಹಾಕಲಾಗಿದ್ದ ಟೈಲ್ಸ್​​ಗಳನ್ನ ಕಳ್ಳರು ಕದ್ದಿದ್ದಾರೆ. ರಾತ್ರಿ ಬೆಳಗಾಗೋವಷ್ಟರಲ್ಲಿ ಕಳ್ಳರು ಈ ಕೃತ್ಯವನ್ನ ಎಸಗಿದ್ದಾರೆ.

ಈ ಸಂಬಂಧ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ಸ್ಥಳೀಯ ಸಿಸಿ ಟಿವಿಯನ್ನ ಪರಿಶೀಲಿಸುತ್ತಿದ್ದಾರೆ. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ. ಈ ವಿಚಾರದ ಬಗ್ಗೆ ತಿಳಿದ ನೆಟ್ಟಿಗರು ಕದಿಯೋಕೆ ಬೇರೆ ಏನೂ ಸಿಗಲಿಲ್ವಾ ಎಂದು ಕೇಳ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...