alex Certify ಫೈಜರ್​ ಕಂಪನಿ ಸಿಇಓಗೆ ಸಿಗದ ಲಸಿಕೆ…! ಕಾರಣವೇನು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫೈಜರ್​ ಕಂಪನಿ ಸಿಇಓಗೆ ಸಿಗದ ಲಸಿಕೆ…! ಕಾರಣವೇನು ಗೊತ್ತಾ…?

ಫೈಜರ್​ ಹಾಗೂ ಬಯೋಟೆಕ್​​ ಸಂಸ್ಥೆ ಸೇರಿ ತಯಾರಿಸಿದ ಕೊರೊನಾ ಲಸಿಕೆಯನ್ನ ಬ್ರಿಟನ್​ನಲ್ಲಿ ಮೊದಲ ಬಾರಿಗೆ ಬಳಕೆ ಮಾಡಲಾಗಿದೆ. ಬ್ರಿಟನ್​ನ ಈ ನಿರ್ಧಾರದ ಬಳಿಕ ಅಮೆರಿಕ ಕೂಡ ಫೈಜರ್ ಲಸಿಕೆಯನ್ನ ಬಳಕೆ ಮಾಡುತ್ತಿದೆ.

ಕೊರೊನಾ ವೈರಸ್​​ನಿಂದಾಗಿ 3 ಲಕ್ಷದಷ್ಟು ಮಂದಿ ಅಮೆರಿಕದಲ್ಲಿ ಸಾವಿಗೀಡಾಗಿದ್ದಾರೆ. ಕೋವಿಡ್​ 19ನಿಂದ ಅತಿ ಹೆಚ್ಚು ಪರಿಣಾಮ ಅನುಭವಿಸಿರುವ ಅಮೆರಿಕ ಇದೀಗ ಈ ಸಂಕಷ್ಟದಿಂದ ಪಾರಾಗಲು ಫೈಜರ್​ ಅಸ್ತ್ರವನ್ನ ಉಪಯೋಗಿಸುತ್ತಿದೆ.

ಇತ್ತ ಸಿಂಗಾಪುರ ಕೂಡ ಫೈಜರ್​ ಲಸಿಕೆ ಬಳಕೆಗೆ ತುರ್ತು ಅನುಮೋದನೆ ನೀಡಿದೆ. ಫೈಜರ್​ ಲಸಿಕೆಯ ಆಮದಿಗಾಗಿ ಕಾಯುತ್ತಿರುವ ಸಿಂಗಾಪುರ ಡಿಸೆಂಬರ್​ ಅಂತ್ಯದೊಳಗೆ ಚಿಕಿತ್ಸೆಗೆ ಬಳಕೆಯಾಗಲಿದೆ.

ಆದರೆ ಅಚ್ಚರಿಯ ವಿಚಾರ ಏನು ಅಂದರೆ ಫೈಜರ್​ ಕಂಪನಿಯ ಸಿಇಒ ಆಲ್ಬರ್ಟ್ ಬೌರ್ಲಾಗೆ ಫೈಜರ್​ ಲಸಿಕೆ ಇನ್ನೂ ಸಿಕ್ಕಿಲ್ಲವಂತೆ. ಇನ್ನು ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಆಲ್ಬರ್ಟ್ ಆದ್ಯತೆಯ ಆಧಾರದ ಮೇಲೆ ಫೈಜರ್​ ಲಸಿಕೆಯನ್ನ ಬಳಕೆ ಮಾಡಲಾಗುತ್ತಿದೆ. ಹೀಗಾಗಿ ನಮ್ಮ ಕಂಪನಿಯ ಯಾವುದೇ ಸಿಬ್ಬಂದಿ ಈ ಸರಪಳಿಯನ್ನ ತುಂಡು ಮಾಡೋಕೆ ಬಯಸೋದಿಲ್ಲ ಎಂದು ಹೇಳಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...