alex Certify ನಂಬಲಸಾಧ್ಯವಾದರೂ ಸತ್ಯ: ಗ್ರಾಮಸ್ಥರು ವಾರಗಟ್ಟಲೇ ಮಾಡಿದ್ದರು ನಿದ್ರೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಂಬಲಸಾಧ್ಯವಾದರೂ ಸತ್ಯ: ಗ್ರಾಮಸ್ಥರು ವಾರಗಟ್ಟಲೇ ಮಾಡಿದ್ದರು ನಿದ್ರೆ

ಕಜಖಸ್ತಾನದ ಈ ಗ್ರಾಮದ ನಿವಾಸಿಗಳು ಫ್ಯಾಂಟೆಸಿ ಚಿತ್ರಗಳಲ್ಲಿ ನಾವು ನೋಡುವಂಥ ಸಿನಿಮೀಯ ಘಟನಾವಳಿಯೊಂದನ್ನು ಆರು ವರ್ಷಗಳ ಹಿಂದೆ ಖುದ್ದು ತಂತಮ್ಮ ಜೀವನದಲ್ಲೇ ಕಂಡಿದ್ದಾರೆ.

2012-2015ರ ನಡುವಿನ ಮೂರು ವರ್ಷಗಳ ಅವಧಿಯಲ್ಲಿ, ಈ ಊರಿನ 160 ಗ್ರಾಮಸ್ಥರಿಗೆ ವಿಚಿತ್ರವಾದ ಅನುಭವಗಳಾಗಿದ್ದು, ಇವುಗಳ ಪೈಕಿ ಅತಿಯಾದ ನಿದ್ರೆ ಹಾಗೂ ವಿಪರೀತವಾದ ಲೈಂಗಿಕಾಸಕ್ತಿಗಳೂ ಸೇರಿವೆ. ಆದರೆ ಈ ಜನರ ನಿದ್ರಾವಧಿಯಲ್ಲಿ ಆದ ವಿಚಿತ್ರ ಬದಲಾವಣೆಗಳು ಜಗತ್ತನ್ನೇ ಬೆಚ್ಚಿ ಬೀಳಿಸಿತ್ತು.

ಕಲಾಚಿ ಎಂಬ ಹೆಸರಿನ ಈ ಊರಿನ ಜನರು ಒಮ್ಮೊಮ್ಮೆ ಆರು ದಿನಗಳ ಮಟ್ಟಿಗೆ ಮಲಗಿಬಿಟ್ಟಿದ್ದರು. ಇದು ಕೇವಲ ವಯಸ್ಕರಿಗೆ ಮಾತ್ರವಲ್ಲದೇ ಮಕ್ಕಳಿಗೂ ಅನುಭವಕ್ಕೆ ಬಂದಿದೆ. ಹಾಸಿಗೆಗಳ ಮೇಲೆ ’ರೆಕ್ಕೆಗಳುಳ್ಳ ಕುದುರೆಗಳು’ ಹಾಗೂ ಹಾವುಗಳನ್ನು ಕಂಡಿರುವುದಾಗಿ ಈ ಮಕ್ಕಳು ಹೇಳಿರುವುದಾಗಿ ವರದಿಯಾಗಿತ್ತು.

ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಮತ್ತೆ ಆಸ್ಪತ್ರೆಗೆ ದಾಖಲು

ಈ ವಿಚಿತ್ರ ಪರಿಸ್ಥಿತಿಯನ್ನುನ ’ಸ್ಲೀಪಿ ಹಾಲೋ’ ಎಂದು ಕರೆಯಲಾಗುತ್ತದೆ. ಕೊಮ್ಸೋಮೋಲ್‌ಸ್ಕಾಯಾ ಪ್ರಾಡ್ವಾ ಹೆಸರಿನ ಪತ್ರಿಕೆಯೊಂದು 2014ರಲ್ಲಿ ಈ ಬಗ್ಗೆ ವರದಿ ಮಾಡಿತ್ತು. ಅನಾರೋಗ್ಯಪೀಡಿತ ವ್ಯಕ್ತಿಗಳು ಅಷ್ಟು ಅವಧಿಗೆ ನಿದ್ರೆ ಮಾಡಿ ಎದ್ದ ಬಳಿಕ ಏನನ್ನೂ ನೆನಪಿಸಿಕೊಳ್ಳುವುದಿಲ್ಲ ಎಂದು ಆ ವೇಳೆ ಪ್ರಕಟಿಸಲಾಗಿತ್ತು.

ಗಣಿಯೊಂದರಲ್ಲಿ ಉಗಮವಾಗುತ್ತಿರುವ ಕಾರ್ಬನ್‌ ಮೋನಾಕ್ಸೈಡ್‌ ಹೆಚ್ಚಿರುವ ಪರಿಣಾಮ ಹೀಗಾಗುತ್ತಿದೆ ಎಂದು ಅಲ್ಲಿ ಹೀಗೆಲ್ಲಾ ಏಕಾಗುತ್ತಿದೆ ಎಂದು ಅರಿಯಲು ಮುಂದಾಗಿರುವ ರಷ್ಯಾದ ವಿಜ್ಞಾನಿ ಲಿಯೋನಿಡ್ ರಿಖ್ವಾನೊವ್‌ ತಿಳಿಸಿದ್ಧಾರೆ. ಸದ್ಯದ ಮಟ್ಟಿಗೆ ಕಲಾಚಿಯಲ್ಲಿ 120 ಕುಟುಂಬಗಳು ಇದ್ದು, ಈಗಿನ ದಿನಗಳಲ್ಲಿ ಆ ಊರಿನ ಜನರ ನಿದ್ರಾವಧಿಗಳು ಸಾಮಾನ್ಯ ಮಟ್ಟದಲ್ಲಿಯೇ ಇವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...