alex Certify OMG: ಈ ಬೆಕ್ಕಿಗಿದೆ ಎರಡು ತಲೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

OMG: ಈ ಬೆಕ್ಕಿಗಿದೆ ಎರಡು ತಲೆ….!

ಎರಡು ತಲೆ ಹಾವಿನ ಫೋಟೋಗಳು ಆಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತದೆ, ಇದೀಗ ಎರಡು ತಲೆಯ ಬೆಕ್ಕಿನ ವಿಡಿಯೋ ಸೋಜಿಗ ಹುಟ್ಟಿಸಿದೆ.

ಅಮೇರಿಕಾದ ಒರೆಗಾನ್ ದಲ್ಲಿ ಈ ಬೆಕ್ಕಿನ ಜನನವಾಗಿದ್ದು ಆಶ್ಚರ್ಯ ಹುಟ್ಟುಹಾಕಿದೆ. ಕಿಂಗ್ ಎಂಬ ಕುಟುಂಬ ಸಾಕಿರುವ ಬೆಕ್ಕು 6 ಮರಿಗಳನ್ನು ಹಾಕಿದ್ದು ಅದರಲ್ಲಿ ಒಂದು ಮರಿಗೆ ವಿಲಕ್ಷಣವಾಗಿ ಎರಡು ಮುಖಗಳು ಕಂಡುಬಂದಿದೆ.

ಈ ಅಪರೂಪದ ಬೆಕ್ಕಿನ ಮರಿಯಲ್ಲಿ ಎರಡು ಜೊತೆ ಕಣ್ಣು, 2‌ಮೂಗು, ಎರಡು ಬಾಯಿ ಇದ್ದು ವಿಶ್ವದ ಗಮನವನ್ನೇ ಸೆಳೆದುಕೊಂಡಿದೆ.

ಈ ಮರಿಯನ್ನು ನೋಡಿ ನಮಗೆ ಆಘಾತವಾಯಿತು, ಈ ರೀತಿಯ ಬೆಕ್ಕಿನ ಬಗ್ಗೆ ಯೋಚನೆಯನ್ನೇ ಮಾಡಿರಲಿಲ್ಲ ಎಂದು ಅದರ ಮಾಲೀಕ ಬಿಜೆ ಕಿಂಗ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಎರಡು ಮುಖ ಇರುವ ಬೆಕ್ಕಿಗೆ ಬಿಸ್ಕತ್ ಹಾಗೂ ಗ್ರೇವಿ ಎಂದು ಹೆಸರಿಡಲಾಗಿದೆ. ಅದರ ಮಾಲಕಿ 2 ಬಾಯಿಗೂ ಹಾಲುಣಿಸುವ ವಿಡಿಯೋ ಈಗ ವೈರಲ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...