alex Certify ರುಚಿಯಾದ ಖರ್ಜೂರದ ಬಿಸ್ಕತ್ ಮನೆಯಲ್ಲೇ ಮಾಡಿ ನೋಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರುಚಿಯಾದ ಖರ್ಜೂರದ ಬಿಸ್ಕತ್ ಮನೆಯಲ್ಲೇ ಮಾಡಿ ನೋಡಿ

ಬೇಕಾಗುವ ಪದಾರ್ಥಗಳು : ಮೈದಾಹಿಟ್ಟು – 1 ಕಪ್, ಹಸಿ ಖರ್ಜೂರದ ತಿರುಳು – 1 ಕಪ್, ಹಾಲು – ಸ್ವಲ್ಪ, ಗೋಡಂಬಿ ತರಿ – 4 ಚಮಚ, ಸಕ್ಕರೆ ಪುಡಿ – 75ಗ್ರಾಂ, ಬೇಕಿಂಗ್ ಪೌಡರ್ – 1 ಚಮಚ.

ತಯಾರಿಸುವ ವಿಧಾನ : ಮೈದಾಹಿಟ್ಟು, ಬೇಕಿಂಗ್ ಪೌಡರ್ ಸೇರಿಸಿ ಜರಡಿ ಹಿಡಿದು ಸಕ್ಕರೆ ಪುಡಿ, ಹಾಲು ಹಾಕಿ ಪೂರಿ ಹಿಟ್ಟಿನ ಹದಕ್ಕೆ ಕಲಸಿ, ಅರ್ಧ ಗಂಟೆ ಫ್ರಿಜ್ ನಲ್ಲಿಡಿ. ನಂತರ ಹಿಟ್ಟನ್ನು ಹೊರ ತೆಗೆದು ಅರ್ಧ ಸೆಂ.ಮೀ. ದಪ್ಪ ಇರುವಂತೆ 2 ಚಪಾತಿ ಲಟ್ಟಿಸಿಕೊಳ್ಳಿ.

ಖರ್ಜೂರವನ್ನು ಸಣ್ಣ ಚೂರು ಮಾಡಿಕೊಂಡು ಗೋಡಂಬಿ ತರಿಯನ್ನು ಸೇರಿಸಿ ಚೆನ್ನಾಗಿ ಬೆರೆಸಿ ಒಂದು ಲಟ್ಟಿಸಿದ ಚಪಾತಿಯ ಮೇಲೆ ಖರ್ಜೂರ, ಗೋಡಂಬಿ ಮಿಶ್ರಣವನ್ನು ಹರಡಿ.

ಇನ್ನೊಂದು ಚಪಾತಿ ಮೇಲಿಟ್ಟು ಹಗುರವಾಗಿ ಲಟ್ಟಿಸಿ. 1 ಬಾಕ್ಸ್ ಮುಚ್ಚಳದಲ್ಲಿ ಒಂದೇ ಅಳತೆಯಲ್ಲಿ ಬಿಲ್ಲೆಗಳನ್ನು ಕೊರೆದು ಬೇಕಿಂಗ್ ತಟ್ಟೆಗೆ ತುಪ್ಪ ಸವರಿ ಬಿಲ್ಲೆಗಳನ್ನು ಜೋಡಿಸಿ. ಓವನ್ ನಲ್ಲಿ 15 ನಿಮಿಷ ಬೇಯಿಸಿ. ಈಗ ರುಚಿಕರ ಖರ್ಜೂರದ ಬಿಸ್ಕತ್ ಸವಿಯಲು ರೆಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...