alex Certify ಮಾಸ್ಕ್ ಧರಿಸಲು ನಿರಾಕರಿಸಿದ್ದ ಮೆಕ್ಸಿಕೊ ಅಧ್ಯಕ್ಷರಿಗೆ ಕೊರೊನಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಸ್ಕ್ ಧರಿಸಲು ನಿರಾಕರಿಸಿದ್ದ ಮೆಕ್ಸಿಕೊ ಅಧ್ಯಕ್ಷರಿಗೆ ಕೊರೊನಾ

ಮೆಕ್ಸಿಕೊ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಕೊರೊನಾದಿಂದ ಬಳಲುತ್ತಿದ್ದಾರೆ. ಕೊರೊನಾದಿಂದ ಹೊರ ಬರಲು ಆಂಡ್ರೆಸ್ ಅನುಸರಿಸಲಾಗ್ತಿರುವ ನಿಯಮಗಳ ಬಗ್ಗೆ ತೀವ್ರ ಟೀಕೆಗೊಳಗಾಗಿದ್ದರು. ಹಾಗೆ ಕೊರೊನಾ ಸಂದರ್ಭದಲ್ಲಿ ಮಾಸ್ಕ್ ಧರಿಸಲು ನಿರಾಕರಿಸಿದ್ದರು.

ಈಗ ಆಂಡ್ರೆಸ್ ಕೊರೊನಾಗೆ ತುತ್ತಾಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಆಂಡ್ರೆಸ್ ಟ್ಟೀಟ್ ಮಾಡಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ನನಗೆ ಕೊರೊನಾ ಲಕ್ಷಣ ಕಾಣಿಸಿಕೊಂಡಿದೆ ಎನ್ನಲು ದುಃಖವಾಗ್ತಿದೆ. ಸೌಮ್ಯ ಲಕ್ಷಣಗಳು ಕಾಣಿಸಿಕೊಂಡಿದ್ದು, ವೈದ್ಯರ ನಿಗಾದಲ್ಲಿದ್ದೇನೆ. ವೈದ್ಯರ ತಂಡದಿಂದ ಚಿಕಿತ್ಸೆ ಸಿಗ್ತಿದೆ ಎಂದು ಆಂಡ್ರೆಸ್ ಹೇಳಿದ್ದಾರೆ.

ನಗು ತರಿಸುತ್ತೆ‌ ಸಿಕ್ಕ ಸಿಕ್ಕ ವಸ್ತುಗಳೆಲ್ಲ ಸ್ಯಾನಿಟೈಸರ್​ ಎಂದುಕೊಳ್ತಿರುವ ಈ ಮುದ್ದಾದ ಮಗುವಿನ ವಿಡಿಯೋ

ಆಂಡ್ರೆಸ್, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೊತೆ ಚರ್ಚೆ ನಡೆಸಬೇಕಿತ್ತು. ರಷ್ಯಾದ ಕೊರೊನಾ ಲಸಿಕೆ ಖರೀದಿ ಬಗ್ಗೆ ಮಾತುಕತೆ ನಡೆಬೇಕಿತ್ತು. ಮೆಕ್ಸಿಕೊದಲ್ಲಿ ಕೊರೊನಾ ಲಸಿಕೆಯನ್ನು ಇನ್ನೂ ಅನುಮೋದಿಸಲಾಗಿಲ್ಲ. ಮೆಕ್ಸಿಕೊದಲ್ಲಿ 1.50 ಲಕ್ಷ ಜನರು ಕೊರೊನಾದಿಂದ ಸಾವನ್ನಪ್ಪಿದ್ದಾರೆ. 17 ಲಕ್ಷ ಮಂದಿ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಮೆಕ್ಸಿಕೊ ರಜಾ ದಿನಗಳ ನಂತ್ರ ಕೊರೊನಾ ರೋಗಿಗಳ ಸಂಖ್ಯೆ ಹೆಚ್ಚಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...