alex Certify ನಗು ತರಿಸುತ್ತೆ‌ ಸಿಕ್ಕ ಸಿಕ್ಕ ವಸ್ತುಗಳೆಲ್ಲ ಸ್ಯಾನಿಟೈಸರ್​ ಎಂದುಕೊಳ್ತಿರುವ ಈ ಮುದ್ದಾದ ಮಗುವಿನ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಗು ತರಿಸುತ್ತೆ‌ ಸಿಕ್ಕ ಸಿಕ್ಕ ವಸ್ತುಗಳೆಲ್ಲ ಸ್ಯಾನಿಟೈಸರ್​ ಎಂದುಕೊಳ್ತಿರುವ ಈ ಮುದ್ದಾದ ಮಗುವಿನ ವಿಡಿಯೋ

ಕೊರೊನಾ ವೈರಸ್​ ಜಗತ್ತಿಗೆ ಬಂದು ಅಪ್ಪಳಿಸಿ ವರ್ಷಗಳೇ ಉರುಳಿದೆ. ಕೊರೊನಾ ವ್ಯಾಕ್ಸಿನೇಷನ್​ ಡ್ರೈವ್​ ಆರಂಭವಾಗಿದೆಯಾದರೂ ಮಾಸ್ಕ್​ ಹಾಗೂ ಸ್ಯಾನಿಟೈಸರ್​ಗಳನ್ನ ಬಿಟ್ಟಿರದ ಅನಿವಾರ್ಯ ಸ್ಥಿತಿ ಇಂದಿಗೂ ಇದೆ.

ಅಂಗಡಿಗಳಲ್ಲಂತೂ ಸ್ಯಾನಿಟೈಸರ್​​ ಸ್ಟೇಷನ್​ಗಳನ್ನೇ ಇಡಲಾಗ್ತಿದೆ. ಪುಟಾಣಿ ಬಾಲಕಿಯೊಬ್ಬಳು ಕಣ್ಣಿಗೆ ಕಾಣುವ ವಸ್ತುಗಳೆಲ್ಲವೂ ಸ್ಯಾನಿಟೈಸರ್​ ಸ್ಟೇಷನ್​ ಎಂದುಕೊಳ್ಳುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗ್ತಿದೆ.

ಈ ಪುಟಾಣಿ ಕಂದಮ್ಮನ ತಾಯಿ ವಿಡಿಯೋವನ್ನ ಚಿತ್ರೀಕರಿಸಿದ್ದಾರೆ. ಇದರಲ್ಲಿ ಮಗು ಇಟ್ಟಿಗೆ, ದಾರಿದೀಪ ಹೀಗೆ ಕಂಡ ಕಂಡ ವಸ್ತುಗಳನ್ನೆಲ್ಲ ಸ್ಯಾನಿಟೈಸರ್​ ಎಂದು ಭಾವಿಸುತ್ತಿರೋದನ್ನ ಕಾಣಬಹುದಾಗಿದೆ. 2020ರಲ್ಲಿ ಹುಟ್ಟಿದವರಿಗೆ ಜಗತ್ತಲ್ಲಿ ಏನನ್ನ ನೋಡಿದ್ರೂ ಸ್ಯಾನಿಟೈಸರ್​ ಕಂಡಂತೆ ಭಾಸವಾಗುತ್ತೆ ಎಂದು ಮಗುವಿನ ತಾಯಿ ಬರೆದುಕೊಂಡಿದ್ದಾರೆ.

When Your First Year of Life is 2020, Everything is a Hand Sanitizing Station

When your first year of life is 2020, everything is a hand sanitizing station…"? Credit: Watch original video by Katie Lightfoot https://www.facebook.com/katie.baumgratz

Posted by NTD Television on Tuesday, January 19, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...