alex Certify ಗರ್ಭಿಣಿ ಮಹಿಳೆಯಿಂದ ಹಾವಿನ ರಕ್ಷಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗರ್ಭಿಣಿ ಮಹಿಳೆಯಿಂದ ಹಾವಿನ ರಕ್ಷಣೆ

ಕ್ಯಾಂಪ್ ವರ್ಡಿ, ಅರಿಜೋನಾ: ದಾರಿಯಲ್ಲಿ ಬಿದ್ದಿದ್ದ ಹಾವನ್ನು ಮುಟ್ಟುವ ಧೈರ್ಯ ಯಾರಿಗೆ ಬರುತ್ತದೆ?  ಆದರೆ, ಇಲ್ಲೊಬ್ಬ ಗರ್ಭಿಣಿ ಮಹಿಳೆ ಗಾಯಗೊಂಡ ಹಾವನ್ನು ರಕ್ಷಿಸಿದ್ದಾಳೆ. ಅಂಗಡಿಯಿಂದ ವಾಪಸ್ ಬರುತ್ತಿದ್ದ ಅರಿಜೋನಾದ ಮಹಿಳೆ ತಾವ್ನೆಯ ರೌವ್ಚ್ ,ರಸ್ತೆಯಲ್ಲಿ ಬಿದ್ದಿದ್ದ 6 ಅಡಿ ಉದ್ದದ ಹಾವನ್ನು ನೋಡಿ, ಕಾರು ನಿಲ್ಲಿಸಿ, ಇಳಿದು ತಮ್ಮ ಚಪ್ಪಲಿಯಿಂದ ಹಾವನ್ನು ತಿರುಗಿಸಿ ತಮ್ಮ ಕೈಯಲ್ಲಿ ಹಿಡಿದುಕೊಳ್ಳುತ್ತಾರೆ.

ನಂತರ ಪತಿಗೆ ಫೋನ್ ಮಾಡಿ ಅವರನ್ನು ಸ್ಥಳಕ್ಕೆ ಕರೆಸಿಕೊಂಡು ಹಾವನ್ನು ಮನೆಗೆ ತೆಗೆದುಕೊಂಡು ಹೋಗುತ್ತಾರೆ. ಮನೆಯಲ್ಲಿ ಆರೈಕೆ ಮಾಡಿ ಹಾವನ್ನು ವಾಪಸ್ ಕಾಡಿಗೆ ಬಿಟ್ಟಿದ್ದಾರೆ. ಅವರು ಹಾವನ್ನು ರಸ್ತೆಯಿಂದ ಎತ್ತಿಕೊಳ್ಳುತ್ತಿರುವ ದೃಶ್ಯವನ್ನು ಒಬ್ಬರು ವಿಡಿಯೋ ಮಾಡಿದ್ದು, ಅದು ವೈರಲ್ ಆಗಿದೆ.

ಹಾವು ವಿಷಕಾರಿ ಅಲ್ಲದ ಕಾರಣ ಅದನ್ನು ಎತ್ತಿಕೊಂದಿದ್ದು, ಅಂತಹ ಸುಂದರ ಹಾವನ್ನು ಸಾಯಲು ಬಿಡಲು ಮನಸ್ಸು ಬರಲಿಲ್ಲ ಎಂದು ಮಹಿಳೆ ಹೇಳಿದ್ದಾರೆ. “ಅರಿಜೋನಾದ ನಿಜವಾದ ಮಹಿಳೆ ಇವಳು”, “ಇವರ ಸಾಹಸ ಮೆಚ್ಚುವಂತದ್ದು” ಎಂದು ಹಲವರು ಕಮೆಂಟ್ ಮಾಡಿದರೆ, “ಅವರು ತಮ್ಮನ್ನೂ ಮತ್ತು ತಮ್ಮ ಮಗುವನ್ನು ಅಪಾಯದಲ್ಲಿ ಸಿಲುಕಿಸಬಾರದಿತ್ತು” ಎಂದು ಮತ್ತೆ ಕೆಲವರು ಕಮೆಂಟ್ ಮಾಡಿದ್ದಾರೆ.

So this happened today ???‍♀️

Posted by Sky Gue on Friday, April 24, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...