alex Certify ಮೋಜಿಗಾಗಿ ಕ್ರೇಟ್ ಹಾಲು ಚೆಲ್ಲಿದವನಿಗೆ ಹಿಗ್ಗಾಮಗ್ಗಾ ಉಗಿತ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೋಜಿಗಾಗಿ ಕ್ರೇಟ್ ಹಾಲು ಚೆಲ್ಲಿದವನಿಗೆ ಹಿಗ್ಗಾಮಗ್ಗಾ ಉಗಿತ…!

ವ್ಯಕ್ತಿಯೊಬ್ಬ ಪ್ರಾಂಕ್ ಮಾಡುವ ಸಲುವಾಗಿ ಒಂದು ಕ್ರೇಟ್ ಹಾಲನ್ನು ಅಜಾಗರೂಕತೆ ರೀತಿಯಲ್ಲಿ ಚೆಲ್ಲಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಬಳಸಿಕೊಂಡಿದ್ದಾನೆ. ಟಿಕ್ ಟಾಕ್ ಬಳಕೆದಾರ ಹಾಲು ಚೆಲ್ಲಿದ ವಿಡಿಯೋಗಳನ್ನು ಪೋಸ್ಟ್ ಮಾಡಿದ್ದಾನೆ.

ಇದನ್ನು ಕಂಡ ನೆಟ್ಟಿಗರು ಅವನೊಬ್ಬ ಸ್ವಾರ್ಥಿ, ಅಜಾಗರೂಕ ಎಂದೆಲ್ಲ ಬೈದಿದ್ದಾರೆ, ಕೊರೊನಾ ಸಾಂಕ್ರಾಮಿಕ ಹರಡುತ್ತಿರುವ ಸಂದರ್ಭದಲ್ಲಿ ಇದೆಲ್ಲ ಬೇಕಿತ್ತಾ ಎಂದು ಜರಿದಿದ್ದಾರೆ.

ವಿಡಿಯೋ ಪೋಸ್ಟ್ ಮಾಡಿದಾತ, ನಾನು ಇಂದು ಆಕಸ್ಮಿಕವಾಗಿ ಇಡಿ ಒಂದು ಕ್ರೇಟ್ ಹಾಲನ್ನು ಚೆಲ್ಲಿಕೊಂಡೆ. ಯಾರೂ ಸಹ ನನ್ನ ಸಹಾಯಕ್ಕೆ ಬರಲಿಲ್ಲ, ಎಲ್ಲರೂ ಚಿತ್ರೀಕರಿಸಿಕೊಳ್ಳುತ್ತಿದ್ದರು ಎಂದು ಹೇಳಿಕೊಂಡಿದ್ದಾರೆ.

ಸುಮಾರು ಆರು ಮಿಲಿಯನ್ ವೀಕ್ಷಣೆಗಳು ಈ ವಿಡಿಯೋ ಪಡೆದುಕೊಂಡಿದೆ. ವ್ಯಕ್ತಿಯೊಬ್ಬರು ಟ್ವೀಟ್ ಮಾಡಿ, ಲಾಕ್ಡೌನ್ ಸಮಯದಲ್ಲಿ ಮತ್ತು ಸಾರ್ವಜನಿಕ ಸ್ಥಳದಲ್ಲಿ ಈ ತಮಾಷೆ ನಿಜವಾಗಿ ಅಗತ್ಯವಿತ್ತೇ ಎಂದು ಪ್ರಶ್ನಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...