alex Certify ಸದಾ ಯಂಗ್ ಆಗಿ ಕಾಣಲು ಮುಖಕ್ಕೆ ಹಚ್ಚಿ ಈ ʼಪೇಸ್ಟ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸದಾ ಯಂಗ್ ಆಗಿ ಕಾಣಲು ಮುಖಕ್ಕೆ ಹಚ್ಚಿ ಈ ʼಪೇಸ್ಟ್ʼ

ಯಂಗ್ ಆಗಿ ಕಾಣಬೇಕು ಅನ್ನೋದು ಎಲ್ಲರ ಆಸೆ. ಇದಕ್ಕಾಗಿ ಸಾವಿರಾರು ರೂಪಾಯಿ ಹಣ ಖರ್ಚು ಮಾಡೋರು ಇದ್ದಾರೆ. ಆದರೆ ಇಂದು ನಾವು ಸುಲಭವಾದ ಉಪಾಯ ಹೇಳ್ತೇವೆ ಕೇಳಿ.

ಜಪಾನಿ ಮಹಿಳೆಯರು ಎಂದೂ ಮೇಕಪ್ ಮಾಡೋದಿಲ್ಲ. ಅವರು ಬಳಸೋದು ಅನ್ನದ ಪೇಸ್ಟ್. ಹೌದು ವಾರದಲ್ಲಿ ಒಂದು ದಿನ ಅನ್ನದ ಪೇಸ್ಟನ್ನು ಮುಖಕ್ಕೆ ಹಚ್ಚಿಕೊಂಡರೆ ನೀವು 10 ವರ್ಷ ಚಿಕ್ಕವರಾಗಿ ಕಾಣುತ್ತೀರಾ ನೆನಪಿರಲಿ.

ಅನ್ನದ ಪೇಸ್ಟ್

ಬೇಕಾಗುವ ಸಾಮಾನು : 3 ಚಮಚ ಅನ್ನ, 1 ಚಮಚ ಹಾಲು, 1 ಚಮಚ ಜೇನು ತುಪ್ಪ.

ಮಾಡುವ ವಿಧಾನ: ಅಕ್ಕಿಗೆ ನೀರು ಹಾಕಿ ಬೇಯಿಸಿ. ಬೆಂದ ನಂತರ ಅನ್ನದ ನೀರನ್ನು ಬಸಿದು ಬದಿಗಿಡಿ. ಈ ಅನ್ನಕ್ಕೆ ಬಿಸಿ ಹಾಲು ಹಾಗೂ ಜೇನುತುಪ್ಪವನ್ನು ಹಾಕಿ. ಈ ಮೂರನ್ನೂ ಸರಿಯಾಗಿ ಮಿಕ್ಸ್ ಮಾಡಿ ಮುಖಕ್ಕೆ ಪ್ಯಾಕ್ ಮಾಡಿಕೊಳ್ಳಿ. ನಂತರ ಅನ್ನದಿಂದ ಬಸಿದಿಟ್ಟಿರುವ ನೀರಿನಲ್ಲಿ ಮುಖ ತೊಳೆಯಿರಿ. ಇದು ನಿಮ್ಮ ಮುಖದ ಮೇಲಿರುವ ತೇವಾಂಶವನ್ನು ಹೀರಿಕೊಳ್ಳುತ್ತದೆ. ಮುಖದ ಮೇಲಿರುವ ಕಲೆಗಳು ಹೋಗುತ್ತವೆ. ಸುಕ್ಕುಗಳು ಕಡಿಮೆಯಾಗುತ್ತವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...