alex Certify ದುಬಾರಿ ಬೆಲೆಗೆ ಮಾರಾಟವಾಗುವ ಈ ಕಲಾಕೃತಿ ಬಿಡಿಸುವವರು ಯಾರು ಅಂತ ತಿಳಿದ್ರೆ ಅಚ್ಚರಿಪಡ್ತೀರಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದುಬಾರಿ ಬೆಲೆಗೆ ಮಾರಾಟವಾಗುವ ಈ ಕಲಾಕೃತಿ ಬಿಡಿಸುವವರು ಯಾರು ಅಂತ ತಿಳಿದ್ರೆ ಅಚ್ಚರಿಪಡ್ತೀರಿ…!

ಅಮೆರಿಕದ ದಕ್ಷಿಣ ಕರೊಲಿನಾದಲ್ಲಿರುವ ಚಿತ್ರ ಕಲಾವಿದರಿಗೆ ಎಲ್ಲಿಲ್ಲದ ಬೇಡಿಕೆ.
ಅವರು ಬಿಡಿಸಿದ ಚಿತ್ರಗಳು ನೂರಾರು ಡಾಲರ್ ಗೆ ಮಾರಾಟವಾಗುತ್ತವೆ. ಇನ್ಸ್ಟಾಗ್ರಾಂ‌ ನಲ್ಲಿ ಈ ಕಲಾವಿದರಿಗೆ ತುಂಬಾ ಫ್ಯಾನ್ ಫಾಲೋವರ್ ಗಳಿದ್ದಾರೆ.

ಆದರೆ ಈ ಕಲಾವಿದರು ಮನುಷ್ಯರಲ್ಲ.‌..! ಅಚ್ಚರಿಯಾದರೂ ಸತ್ಯ. ಮೈಕೆಲ್ ಹಾಗೂ ಸಾರಾ ಥೇಮ್ ಅವರು ಸಾಕಿದ ಮೂರು ರಕೂನ್ (ಅಮೆರಿಕದಲ್ಲಿರುವ ಇಣಚಿಯಂತಿರುವ ಮಾಂಸಹಾರಿ ಪ್ರಾಣಿ)ಗಳು ತಮ್ಮ ಅದ್ಭುತ ಪ್ರತಿಭೆಯಿಂದ ಪ್ರಸಿದ್ಧವಾಗಿವೆ.‌

ಪೈಪರ್, ಟಿಟ್ಟೋ ಹಾಗೂ ಚೀಟ್ಟೋ ಎಂಬ ಹೆಸರಿನ ಮೂರು ರಕೂನ್ ಗಳು ತಮ್ಮ ಕಾಲಿನಿಂದ ಕ್ಯಾನ್ವಾಸ್ ಮೇಲೆ ಪೇಂಟ್ ಮಾಡುತ್ತವೆ. ಇದುವರೆಗೆ ಹತ್ತಾರು ಚಿತ್ರಗಳನ್ನು 75 ರಿಂದ 100 ಡಾಲರ್ ಗೆ ಮಾರಾಟ ಮಾಡಲಾಗಿದೆ. ರಕೂನ್‌ ಮಾತ್ರವಲ್ಲ. ತರಬೇತಿ ನೀಡಿದರೆ ಯಾವ ಪ್ರಾಣಿ ಬೇಕಾದರೂ ಚಿತ್ರ ಬಿಡಿಸಬಹುದು ಎಂದು ನ್ಯೂಯಾರ್ಕ್ ವಿವಿಯ ಪ್ರಾಧ್ಯಾಪಕ‌ ಸುಝಾನೆ ಮೆಕ್‌ಡೊನಾಲ್ಡ್ ಅಭಿಪ್ರಾಯಪಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...