alex Certify Viral Video | ಕೋಟಿ ರೂ. ಮೌಲ್ಯದ ಬಾಳೆಹಣ್ಣಿನ ಕಲಾಕೃತಿ ಗುಳುಂ ಮಾಡಿದ ವಿದ್ಯಾರ್ಥಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Viral Video | ಕೋಟಿ ರೂ. ಮೌಲ್ಯದ ಬಾಳೆಹಣ್ಣಿನ ಕಲಾಕೃತಿ ಗುಳುಂ ಮಾಡಿದ ವಿದ್ಯಾರ್ಥಿ

ಸಿಯೋಲ್​: ಒಬ್ಬರಿಗೆ ಹಸಿವಾದಾಗ, ಅವರು ಸುಲಭವಾಗಿ ಲಭ್ಯವಿರುವ ಯಾವುದನ್ನಾದರೂ ತಿನ್ನಲು ಸಿದ್ಧವಾಗಿರುತ್ತಾರೆ. ದೀರ್ಘ ಕಾಲದವರೆಗೆ ಆಹಾರ ಸಿಗದವರು ಹಸಿ ಮಾಂಸವನ್ನು ತಿನ್ನುವ ಜನರನ್ನು ನಾವು ಆಗಾಗ್ಗೆ ನೋಡುತ್ತೇವೆ. ಆದರೆ ಸಿಯೋಲ್ ವಿದ್ಯಾರ್ಥಿಯೊಬ್ಬ 120,000 ಡಾಲರ್ (ಸುಮಾರು 1 ಕೋಟಿ ರೂ.) ಮೌಲ್ಯದ ಗೋಡೆಗೆ ಅಂಟಿಸಿದ ಬಾಳೆಹಣ್ಣಿನ ದುಬಾರಿ ಕಲಾಕೃತಿಯನ್ನು ಗುಳುಂ ಮಾಡಿದ್ದಾನೆ…!

ಲೀಯಂ ಮ್ಯೂಸಿಯಂ ಆಫ್ ಆರ್ಟ್‌ಗೆ ಭೇಟಿ ನೀಡಿದ ವಿದ್ಯಾರ್ಥಿ ಈ ರೀತಿ ಮಾಡಿದ್ದಾನೆ. ತನಗೆ ಹಸಿವಾದದ್ದರಿಂದ ಹೀಗೆ ಮಾಡಿದೆ ಎಂದಿದ್ದಾನೆ.

ನ್ಯೂಯಾರ್ಕ್ ಪೋಸ್ಟ್‌ನ ವರದಿಯ ಪ್ರಕಾರ, ಪ್ರಸಿದ್ಧ ಕಲಾಕೃತಿಯನ್ನು ಇಟಾಲಿಯನ್ ಕಲಾವಿದ ಮೌರಿಜಿಯೊ ಕ್ಯಾಟೆಲಾನ್ ರಚಿಸಿದ್ದಾರೆ. ಇದನ್ನು ಲೀಯಂ ಮ್ಯೂಸಿಯಂನಲ್ಲಿ ಪ್ರದರ್ಶನದ ಭಾಗವಾಗಿ ಇರಿಸಲಾಗಿತ್ತು, ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿದ ವಿದ್ಯಾರ್ಥಿ ನೊಹ್ ಹುಯ್ನ್-ಸೂ, ಗೋಡೆಯ ಮೇಲೆ ಡಕ್ಟ್ ಟೇಪ್‌ಗೆ ಜೋಡಿಸಲಾದ ಬಾಳೆಹಣ್ಣನ್ನು ಹೊರತೆಗೆದು ಒಂದು ನಿಮಿಷಕ್ಕೂ ಹೆಚ್ಚು ಕಾಲ ಹಣ್ಣನ್ನು ಆನಂದಿಸಿದ್ದಾನೆ.

ಬಾಳೆಹಣ್ಣು ತಿಂದ ನಂತರ ಮತ್ತೊಮ್ಮೆ ಹಣ್ಣಿನ ಸಿಪ್ಪೆಯನ್ನು ಗೋಡೆಗೆ ಅಂಟಿಸಿದ್ದಾನೆ. ಇಡೀ ಘಟನೆಯನ್ನು ಆತನ ಸ್ನೇಹಿತ ರೆಕಾರ್ಡ್ ಮಾಡಿದ್ದು, ಬಳಿಕ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...