alex Certify ಟ್ವಿಟರ್ನಲ್ಲಿಯೇ ಟ್ವಿಟರ್ ವಿರುದ್ಧ ಕೆಂಡ ಕಾರುತ್ತಿರುವ ಟ್ರಂಪ್ ಬೆಂಬಲಿಗರು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ವಿಟರ್ನಲ್ಲಿಯೇ ಟ್ವಿಟರ್ ವಿರುದ್ಧ ಕೆಂಡ ಕಾರುತ್ತಿರುವ ಟ್ರಂಪ್ ಬೆಂಬಲಿಗರು…!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ರ ಟ್ವಿಟರ್​ ಖಾತೆಯನ್ನ ಶಾಶ್ವತವಾಗಿ ರದ್ದು ಮಾಡಿರುವ ಟ್ವಿಟರ್​ ಕ್ರಮ ಸದ್ಯ ವಿಶ್ವ ಮಟ್ಟದಲ್ಲಿ ಚರ್ಚೆಯಾಗುತ್ತಿರುವ ವಿಚಾರ. ಟ್ವಿಟರ್ ಸಂಸ್ಥೆಯ ಈ ಕ್ರಮದ ವಿರುದ್ಧ ಟ್ರಂಪ್​ ಸ್ನೇಹಿತರು, ಕುಟುಂಬಸ್ಥರು ಹಾಗೂ ಬೆಂಬಲಿಗರು ಕೆಂಡಾಮಂಡಲರಾಗಿದ್ದು ಇದು ವಾಕ್​ ಸ್ವಾತಂತ್ರ್ಯದ ಹರಣ ಎಂದು ಕಿಡಿಕಾರುತ್ತಿದ್ದಾರೆ.

ವಾಕ್​ ಸ್ವಾತಂತ್ರ್ಯ ಸತ್ತು ಹೋಗಿದೆ ಹಾಗೂ ಇದು ಎಡಪಂಥೀಯರ ನಿಯಂತ್ರಣದಲ್ಲಿದೆ ಅಂತಾ ಡೊನಾಲ್ಡ್​ ಟ್ರಂಪ್​ ಹಿರಿಯ ಪುತ್ರ ಡೊನಾಲ್ಡ್ ಟ್ರಂಪ್​ ಜ್ಯೂನಿಯರ್​ ತಮ್ಮ ಟ್ವಿಟರ್​ ಪೋಸ್ಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ.

ಇತ್ತ ಅಮೆರಿಕ ಅಧ್ಯಕ್ಷರ ವೈಯಕ್ತಿಕ ವಕೀಲ ರುಡಿ ಗ್ವಿಲಿಯಾನಿ, ಇನ್ನು ಯಾರ ಮಾತನ್ನ ಹತ್ತಿಕ್ಕಲಾಗುತ್ತೆ..? ಎಂದು ಪ್ರಶ್ನೆ ಮಾಡಿದ್ದಾರೆ.

ಅಮೆರಿಕ ರಾಜ್ಯ ಕಾಯದರ್ಶಿಯಾಗಿರುವ ಮೈಕ್​ ಪಾಂಪಿಯೋ ತಮ್ಮ ವೈಯಕ್ತಿಕ ಟ್ವಿಟರ್ ಖಾತೆಯಲ್ಲಿ, ಬೇಸರದ ವಿಚಾರ ಅಂದ್ರೆ, ಇದು ಎಡಪಂಥೀಯರ ಹೊಸ ತಂತ್ರವೇನಲ್ಲ. ಕಳೆದ ಅನೇಕ ವರ್ಷಗಳಿಂದ ತಮ್ಮ ವಿರುದ್ಧ ಮಾತನಾಡುವವರ ಧ್ವನಿಯನ್ನ ಎಡಪಂಥೀಯರು ಹತ್ತಿಕುತ್ತಲೇ ಬಂದಿದ್ದಾರೆ ಅಂತಾ ಟ್ವೀಟಾಯಿಸಿದ್ದಾರೆ.

ಇನ್ನು ಇವೆಲ್ಲದರ ನಡುವೆ ಟ್ವಿಟರ್​ನಿಂದ ಶಾಶ್ವತ ನಿಷೇಧಕ್ಕೊಳಗಾಗಿರುವ ಡೊನಾಲ್ಡ್ ಟ್ರಂಪ್​ ತಮ್ಮದೇ ಆದ ಸಾಮಾಜಿಕ ಜಾಲತಾಣ ವೇದಿಕೆಯನ್ನ ನಿರ್ಮಾಣ ಮಾಡಲಾಗಿದ್ದಾರೆ ಅಂತಾ ಹೇಳಲಾಗ್ತಿದೆ.

ಶುಕ್ರವಾರ ತಮ್ಮ ಟ್ವಿಟರ್ ಖಾತೆ ಡಿಲೀಟ್ ಆಗೋದಕ್ಕೂ ಮುನ್ನ ಸ್ವತಃ ಟ್ರಂಪ್ ಈ ವಿಚಾರವಾಗಿ ಪೋಸ್ಟ್ ಒಂದನ್ನ ಮಾಡಿ ಕೂಡಲೇ ಡಿಲೀಟ್​ ಕೂಡ ಮಾಡಿದ್ದರು. ಈ ಮಾತಿಗೆ ಪುಷ್ಟಿ ಎಂಬಂತೆ ಬಲಪಂಥೀಯರೇ ಹೆಚ್ಚಾಗಿ ಬಳಕೆ ಮಾಡುವ ಪಾರ್ಲರ್​ ಇಲ್ಲವೇ ಗ್ಯಾಬ್​ನಲ್ಲಿ ಬಳಕೆದಾರರ ಸಂಖ್ಯೆ ಶನಿವಾರದಿಂದ ಗಣನೀಯ ಪ್ರಮಾಣದಲ್ಲಿ ಏರಿಕೆ ಕಾಣ್ತಿದೆ. ಗ್ಯಾಬ್​ ಅಪ್ಲಿಕೇಶನ್​ 12 ಗಂಟೆಗಳಲ್ಲಿ 12 ಮಿಲಿಯನ್​ಗೂ ಅಧಿಕ ಬಳಕೆದಾರರನ್ನ ಹೆಚ್ಚಿಸಿಕೊಂಡಿದೆ.

ಗ್ಯಾಬ್​ ಹಾಗೂ ಪಾರ್ಲರ್​ ಅಪ್ಲಿಕೇಶನ್​ಗಳನ್ನ ಆಪಲ್​ ಹಾಗೂ ಗೂಗಲ್ ಪ್ಲೇ ಸ್ಟೋರ್​ನಿಂದ ತೆಗೆದು ಹಾಕಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...