alex Certify 2024ರಲ್ಲಿ ಮೊದಲ ಬಾರಿ ಚಂದ್ರನ ಮೇಲೆ ಕಾಲಿಡಲಿದ್ದಾಳೆ ಮಹಿಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

2024ರಲ್ಲಿ ಮೊದಲ ಬಾರಿ ಚಂದ್ರನ ಮೇಲೆ ಕಾಲಿಡಲಿದ್ದಾಳೆ ಮಹಿಳೆ

ಯುಎಸ್ ಬಾಹ್ಯಾಕಾಶ ಸಂಸ್ಥೆ ನಾಸಾ ಮತ್ತೊಮ್ಮೆ ಮನುಷ್ಯರನ್ನು ಚಂದ್ರನತ್ತ ಕಳುಹಿಸಲು ತಯಾರಿ ನಡೆಸುತ್ತಿದೆ. 1972 ರಲ್ಲಿ ನಾಸಾ ಮೊದಲ ಬಾರಿಗೆ ಮನುಷ್ಯರನ್ನು ಚಂದ್ರನ ಬಳಿಗೆ ಕಳುಹಿಸಿತ್ತು. ನಾಸಾ ಮುಖ್ಯಸ್ಥ ಜಿಮ್ ಬ್ರಿಡೆನ್‌ಸ್ಟೈನ್ ಈ ವಿಷ್ಯವನ್ನು ತಿಳಿಸಿದ್ದಾರೆ.

ನಾಸಾ 2024 ರಲ್ಲಿ ಮೊದಲ ಮಹಿಳಾ ಗಗನಯಾತ್ರಿಯನ್ನು ಚಂದ್ರನ ಮೇಲೆ ಇಳಿಸಲು ಯೋಜಿಸುತ್ತಿದೆ. ಪುರುಷ ಗಗನಯಾತ್ರಿ ಕೂಡ ಈ ಕಾರ್ಯಾಚರಣೆಯಲ್ಲಿರಲಿದ್ದಾರೆಂದು ಅವರು ಹೇಳಿದ್ದಾರೆ. ನಾಸಾ ಪ್ರಕಾರ, ವೈಜ್ಞಾನಿಕ ಆವಿಷ್ಕಾರ, ಆರ್ಥಿಕ ಲಾಭಗಳಿಗಾಗಿ ಮತ್ತು ಹೊಸ ತಲೆಮಾರಿನ ಪರಿಶೋಧಕರಿಗೆ ಸ್ಫೂರ್ತಿ ನೀಡಲು ಈ ಕಾರ್ಯಾಚರಣೆಯನ್ನು ಚಂದ್ರನ ಮೇಲೆ ಪ್ರಾರಂಭಿಸಲಾಗುತ್ತಿದೆ.

ದೇಶದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಯುಎಸ್ ಸಂಸತ್ತು ಡಿಸೆಂಬರ್ ವೇಳೆಗೆ ಆರಂಭಿಕ ಬಜೆಟ್ ಆಗಿ 23 ಸಾವಿರ 545 ಕೋಟಿ ರೂಪಾಯಿಗಳನ್ನು ಅನುಮೋದಿಸಿದರೆ, ಚಂದ್ರನ ಮೇಲೆ ನಮ್ಮ ಅಭಿಯಾನವನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದು ನಾಸಾ ಹೇಳಿದೆ.

ಈ ಮಿಷನ್ 4 ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ. ಇದಕ್ಕೆ ಸುಮಾರು 28 ಬಿಲಿಯನ್ ಡಾಲರ್ ವೆಚ್ಚವಾಗಲಿದೆ. ಈ ಮೊದಲು ಮಾಡಿದ ವೈಜ್ಞಾನಿಕ ಸಂಶೋಧನೆಗಿಂತ ವಿಭಿನ್ನ ಸಂಶೋಧನೆಗಳನ್ನು ಇದರಲ್ಲಿ ಮಾಡಲಾಗುತ್ತದೆ ಎಂದು ನಾಸಾ ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...