alex Certify ಫೇರೀ ವೃತ್ತಗಳ ʼವಿಸ್ಮಯʼ ಕೊನೆಗೂ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫೇರೀ ವೃತ್ತಗಳ ʼವಿಸ್ಮಯʼ ಕೊನೆಗೂ ಬಹಿರಂಗ

Image result for Mystery Behind African 'Fairy Circles' Solved, the Answer is More Toxic Than We Thought

ನಮೀಬಿಯಾ, ಅಂಗೋಲಾ ಹಾಗೂ ದಕ್ಷಿಣ ಆಫ್ರಿಕಾದ ವಾಯುವ್ಯದಲ್ಲಿರುವ ನಮೀಬ್ ಮರುಭೂಮಿಯಲ್ಲಿರುವ ಫೇರೀ ವೃತ್ತಗಳ ಬಗ್ಗೆ ವಿಜ್ಞಾನಿಗಳು ದಶಕಗಳ ಮಟ್ಟಿಗೆ ತಲೆ ಕೆಡಿಸಿಕೊಂಡು ಸಂಶೋಧನೆ ಮಾಡುತ್ತಿದ್ದರು.

ಪ್ರಿಟೋರಿಯಾ ಹಾಗೂ ಐಟಿಎಂಓನ ವಿವಿಯ ವಿಜ್ಞಾನಿಗಳು ನಡೆಸಿದ ಸಂಶೋಧನೆಯಲ್ಲಿ ಈ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಯೂಫೋರ್ಬಿಯಾ ತಳಿಯ ಸಸಿಗಳು ಮೃತಪಟ್ಟ ಕಾರಣ ಈ ರೀತಿಯ ವೃತ್ತಗಳು ಹುಟ್ಟಿಕೊಂಡಿವೆ ಎಂದು ತಿಳಿದು ಬಂದಿದೆ.

ಥೇಟ್​ ಮನುಷ್ಯರಂತೆ ಹಲ್ಲನ್ನ ಹೊಂದಿದೆ ಈ ವಿಚಿತ್ರ ಮೀನು

ಪ್ರಿಟೋರಿಯಾ ವಿವಿಯ ಸಸ್ಯ ಹಾಗೂ ಮಣ್ಣಿನ ವಿಜ್ಞಾನ ಇಲಾಖೆಯ ಪ್ರಾಧ್ಯಾಪಕ ಮರಿಯಾನ್ ಮೆಯರ್‌‌ ನೇತೃತ್ವದಲ್ಲಿ 2015ರಲ್ಲಿ ಈ ಕೆಲಸ ಆರಂಭವಾಗಿದೆ. ಪೊದೆಗಳಾದ ಯುಫೋರ್ಬಿಯಾ ಕುರಿತಂತೆ ಅಧ್ಯಯನ ನಡೆಸಿದ ವಿಜ್ಞಾನಿಗಳು, ಈ ಫೇರೀ ವೃತ್ತಗಳ ಹಿಂದಿನ ರಸಾಯನಶಾಸ್ತ್ರ ಹಾಗೂ ಜನವಿಜ್ಞಾನದ ಆಯಾಮಗಳನ್ನು ಸಂಶೋಧಿಸಿದ್ದಾರೆ.

ನಮೀಬಿಯಾದ ಮರಳು ನೀರನ್ನು ಹಿಡಿದಿಟ್ಟುಕೊಳ್ಳಲು ಕ್ಷಮತೆ ಹೊಂದಿರದ ಕಾರಣ, ನೀರು ಹಾಗೂ ಪೋಷಕಾಂಶಗಳ ಲಭ್ಯತೆಯ ಕೊರತೆ ಕಾರಣದಿಂದ ಯುಫೋರ್ಬಿಯಾ ಸಸಿಗಳು ಈ ಬರಪೀಡಿತ ವೃತ್ತಗಳು ಸೃಷ್ಟಿಯಾಗಿವೆ. ಇದರೊಂದಿಗೆ ಕಳೆದ 2-3 ದಶಕಗಳಲ್ಲಿ ಅವ್ಯಾಹತವಾಗಿ ತಾಪಮಾನ ಏರಿಕೆಯಾದ ಕಾರಣದಿಂದಲೂ ಸಹ ಹೀಗೆ ಆಗಿದೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...