alex Certify ಕೊರೊನಾದಿಂದ ಸಾವಿಗೀಡಾದ ಬಿಷಪ್​​ ಮೃತದೇಹಕ್ಕೆ ಭಕ್ತರಿಂದ ಚುಂಬನ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾದಿಂದ ಸಾವಿಗೀಡಾದ ಬಿಷಪ್​​ ಮೃತದೇಹಕ್ಕೆ ಭಕ್ತರಿಂದ ಚುಂಬನ..!

ಬಲ್ಕನ್​ ರಾಷ್ಟ್ರಗಳಲ್ಲೊಂದಾದ ಮೊಂಟೆನೆಗ್ರೋದ ಪೊಡ್ಕೋರಿಕಾದಲ್ಲಿ ಕೊರೊನಾದಿಂದ ಮೃತರಾದ ಬಿಷಪ್​ ಅಂತ್ಯಕ್ರಿಯೆಯಲ್ಲಿ ಸಾವಿರಾರು ಮಂದಿ ಭಾಗಿಯಾಗುವ ಮೂಲಕ ಕೋವಿಡ್ ಮಾರ್ಗಸೂಚಿಯನ್ನ ಉಲ್ಲಂಘಿಸಿದ್ದಾರೆ.

ಸೆರ್ಬಿಯನ್​ ಆರ್ಥೋಡಕ್ಸ್ ಚರ್ಚ್​ನ ಬಿಷಪ್​ ಐರಿನೆಜ್​ ಕೊರೊನಾ ವೈರಸ್​ನಿಂದಾಗಿ ಮೃತಪಟ್ಟಿದ್ದರು. ಅವರ ಮೃತದೇಹವನ್ನ ಚರ್ಚ್ ಒಳಗೆ ತರಲಾಗಿದ್ದು ಜನಸ್ತೋಮವೇ ನೆರೆದಿದೆ.

ಚರ್ಚ್​ನ ಒಳಗಿದ್ದ ಸಿಬ್ಬಂದಿಯಾಗಲಿ ಭಕ್ತರಾಗಲಿ ಮಾಸ್ಕ್​ ಹಾಗೂ ಸಾಮಾಜಿಕ ಅಂತರ ಕಾಪಾಡಿದ್ದು ಕಂಡು ಬರಲಿಲ್ಲ. ಮೃತದೇಹದ ಬಳಿಗೇ ಹೋದ ಭಕ್ತರು ಬಿಷಪ್​ ಮೃತದೇಹಕ್ಕೆ ಮುತ್ತಿಕ್ಕಿದ್ದಾರೆ.

ಮಾಂಟೆನೆಗ್ರೋದಲ್ಲಿ ಕಳೆದ ಕೆಲದಿನಗಳಿಂದ ಕೊರೊನಾ ಪ್ರಕರಣ ಏರಿಕೆಯಾಗುತ್ತಲೇ ಇದೆ. ಕೋವಿಡ್​ ಹರಡುವಿಕೆ ತಡೆಯಲು ಅಧಿಕಾರಿಗಳು ಹೆಣಗಾಡುತ್ತಿರೋದ್ರ ಮಧ್ಯೆಯೇ ನಗರದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದ್ದು ಆತಂಕ ಇನ್ನಷ್ಟು ಹೆಚ್ಚಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...