alex Certify ನಿದ್ರೆ ಮಾಡುವ ಸ್ಪರ್ಧೆಯಲ್ಲಿ 350 ಯುರೋ ಗೆದ್ದ ಭೂಪ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿದ್ರೆ ಮಾಡುವ ಸ್ಪರ್ಧೆಯಲ್ಲಿ 350 ಯುರೋ ಗೆದ್ದ ಭೂಪ….!

ನಮ್ಮ ನಡುವೆ ಚಿತ್ರ ವಿಚಿತ್ರ ಸ್ಪರ್ಧೆಗಳು ನಡೆಯುತ್ತಿರುತ್ತದೆ. ಆದರೆ, ಮಲಗುವ ಸ್ಪರ್ಧೆ ಬಗ್ಗೆ ಕೇಳಿದ್ದೀರಾ? ಯೂರೋಪ್​ನ ಪ್ರತಿ ವರ್ಷ ಮಾಂಟೆನೆಗ್ರೊದಲ್ಲಿ ಈ ವಿಚಿತ್ರ ಸ್ಪರ್ಧೆ ನಡೆಸಲಾಗುತ್ತದೆ.

ಈ ಬಾರಿ ಸತತ 60 ಗಂಟೆಗಳ ಕಾಲ ಮಲಗಿದ ವ್ಯಕ್ತಿ ಪ್ರಶಸ್ತಿಯನ್ನು ಪಡೆದನು. ಆತನ ಹೆಸರು ಜಾರ್ಕೊ ಪೆಜಾನೋವಿಕ್​. ಈ ವಿಲಕ್ಷಣ ಸವಾಲಿನ 12ನೇ ವರ್ಷದ ಚಾಂಪಿಯನ್​ ಆಗಿದ್ದಾರೆ.

ನಾನು ಈ ಸ್ಪರ್ಧೆಗೆ ತಯಾರಿ ನಡೆಸಿರಲಿಲ್ಲ. ಕಂಪನಿ ಬೆಂಬಲ ಇದ್ದರೆ ಈ ಪ್ರಯತ್ನ ಮಾಡಬಹುದು ಎಂದು ಸ್ಥಳೀಯ ಮಾಧ್ಯಮಕ್ಕೆ ಹೇಳಿಕೊಂಡಿದ್ದಾರೆ.

ಸ್ಪರ್ಧೆಯು 9 ಮಂದಿ ಭಾಗವಹಿಸುವವರೊಂದಿಗೆ ಪ್ರಾರಂಭವಾಯಿತು. ಆದರೆ, ಮೊದಲ ದಿನದ ಅಂತ್ಯಕ್ಕೆ 7 ಮಂದಿ ಹೊರಬಿದ್ದರು. ಪೆಜಾನೋವಿಕ್​ ಮತ್ತೊಬ್ಬ ಸ್ಪಧಿರ್ ವುಕ್​ ಕೊಲ್ಜೆನ್ಸಿಕ್​ ಜೊತೆಗೆ “ದೊಡ್ಡ ಸೋಮಾರಿತನ” ಶೀರ್ಷಿಕೆಗಾಗಿ ಹೋರಾಡಿದರು.

ಕೊನೆಯಲ್ಲಿ, ಪೆಜಾನೋವಿಕ್​ ವಿಜಯಶಾಲಿಯಾದರು. 350 ಯುರೋ ತಮ್ಮದಾಗಿಸಿಕೊಂಡರು. ಆತ ಅರವತ್ತು ತಾಸು ನಿದ್ರಿಸಿದ ಸಾಹಸ ನಿಜಕ್ಕೂ ಆಶ್ಚರ್ಯಕರವಾದದ್ದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...