alex Certify ಸ್ಕೈ ಡೈವಿಂಗ್‌ ಮಾಡುವಾಗಲೇ ಯುವಕನಿಂದ ಗೆಳತಿಗೆ ʼಪ್ರೇಮʼ ನಿವೇದನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಕೈ ಡೈವಿಂಗ್‌ ಮಾಡುವಾಗಲೇ ಯುವಕನಿಂದ ಗೆಳತಿಗೆ ʼಪ್ರೇಮʼ ನಿವೇದನೆ

ಪ್ರೀತಿ ಪಾತ್ರರ ಬಳಿ ಪ್ರೇಮ ನಿವೇದನೆ ಮಾಡಿಕೊಳ್ಳೋದು ಅಂದರೆ ಸಣ್ಣ ವಿಚಾರವಂತೂ ಅಲ್ಲವೇ ಇಲ್ಲ. ಇದಕ್ಕಾಗಿ ಪ್ರೀತಿಸಿದವರು ಅದರಲ್ಲೂ ವಿಶೇಷವಾಗಿ ಯುವಕರು ವಿಭಿನ್ನವಾಗಿ ಪ್ಲಾನ್​ ಮಾಡುತ್ತಾರೆ. ಒಳ್ಳೆಯ ಜಾಗದಲ್ಲಿ, ಇಲ್ಲವೇ ಹುಡುಗಿಗೆ ಇಷ್ಟವಾಗೋ ಹೋಟೆಲ್​, ಕ್ಯಾಂಡಲ್​ ಲೈಟ್​ ಡಿನ್ನರ್​ ಹೀಗೆ ಸಾಕಷ್ಟು ವಿನೂತನ ಮಾರ್ಗಗಳನ್ನ ಬಳಸಿಕೊಂಡು ಪ್ರೇಮ ನಿವೇದನೆ ಮಾಡ್ತಾರೆ.

ʼಮ್ಯಾನ್ ಆಫ್ ದ ಮ್ಯಾಚ್ʼ ಗೆದ್ದವನಿಗೆ 5 ಲೀಟರ್ ಪೆಟ್ರೋಲ್‌ ಗಿಫ್ಟ್

ಆದರೆ ಈ ವಿಚಾರದಲ್ಲಿ ರೇ ಎಂಬ ಹೆಸರಿನ ಪೈಲಟ್​ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ರೇ ತನ್ನ ಗೆಳತಿಗೆ ಸ್ಕೈ ಡೈವಿಂಗ್​​ಗೆ ಕರೆದೊಯ್ದಿದ್ದಾರೆ. ಬಾಯಲ್ಲಿ ಉಂಗುರವನ್ನ ಕಚ್ಚಿಕೊಂಡಿದ್ದ ರೇ ಆಕಾಶದಲ್ಲಿ ತೇಲುತ್ತಿರುವಾಗಲೇ ಗೆಳತಿಗೆ ಮದುವೆಯಾಗುವಂತೆ ನಿವೇದನೆ ಮಾಡಿದ್ದಾರೆ. ಗೆಳೆಯನ ಈ ಸಪ್ರೈಸ್​ ಕಂಡು ಕ್ಯಾಟಿ ಸಿಕ್ಕಾಪಟ್ಟೆ ಖುಷ್​ ಆಗಿದ್ದಾಳೆ.

ಮಾತ್ರವಲ್ಲದೇ ಈ ಪ್ರೇಮ ನಿವೇದನೆಗೆ ಒಪ್ಪಿಗೆ ನೀಡಿದ್ದಾಳೆ. ರೇ ಈ ವಿಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿದ್ದು ಸಖತ್​ ವೈರಲ್​ ಆಗಿದೆ.

View this post on Instagram

A post shared by Wingman (@wingmanskydive)

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...