alex Certify ಚಾಕೊಲೇಟ್ ಗಳ ಮೇಲೆ ಕೂತ ಪಾರಿವಾಳ…! ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಾಕೊಲೇಟ್ ಗಳ ಮೇಲೆ ಕೂತ ಪಾರಿವಾಳ…! ವಿಡಿಯೋ ವೈರಲ್

ಮಳಿಗೆಯೊಂದರ ಗಾಜಿನ ಪೆಟ್ಟಿಗೆ ಹೊಕ್ಕ ಪಾರಿವಾಳವೊಂದು, ಅದರೊಳಗೆ ಪೇರಿಸಿಟ್ಟ ಕ್ಯಾಡ್ಬರಿ ಕ್ಯಾರಾಮೆಲ್ ಚಾಕೊಲೇಟ್ ಗಳ ಮೇಲೆ ಕುಳಿತಿದೆ.

ಪಾರಿವಾಳದ ಸದ್ದು ಕೇಳಿದ ಅಂಗಡಿ ಮಾಲೀಕ ಕಿಮ್ ಬ್ಲ್ಯಾಕ್ಮನ್, ಅದರ ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ಉತ್ತರ ಲಂಡನ್ ನ ಎನ್ ಫೀಲ್ಡ್ ಪ್ರದೇಶದಲ್ಲಿ ಟೆಸ್ಕೊ ಸ್ಟೋರ್ ಎಂಬ ಮಳಿಗೆ ಇದೆ. ಇಲ್ಲಿಗೆ ಪಾರಿವಾಳ ಅತಿಥಿ. ಸದಾ ಮಳಿಗೆಯೊಳಗೆ ಹೊಕ್ಕಿರುವ ಅದು, ಒಮ್ಮೊಮ್ಮೆ ಒಂದು ಕಡೆ ಕುಳಿತು ಹಾರಿ ಹೋಗುತ್ತಿತ್ತು.

ಇತ್ತೀಚೆಗೆ ಕ್ಯಾಡ್ಬರಿ ಚಾಕೊಲೇಟ್ ಗಳಿದ್ದ ಟ್ರೇ ಒಳಗೆ ಬೆಚ್ಚಗೆ ಕುಳಿತಿದ್ದು, ಕೇವಲ 7 ಸೆಕೆಂಡಿನ ಇದರ ವಿಡಿಯೋ 1.8 ಲಕ್ಷ ಬಾರಿ ವೀಕ್ಷಿಸಲ್ಪಟ್ಟಿದೆ. ಚಾಕೊಲೇಟ್ ಮೊಟ್ಟೆಗಳನ್ನು ರಕ್ಷಿಸಿಕೊಳ್ಳಲು ಹೆಣ್ಣು ಪಾರಿವಾಳ ಟೆಸ್ಕೋಗೆ ಹೊಕ್ಕಿದೆ ಎಂದು ಕಿಮ್ ಅಡಿಬರಹ ಬರೆದಿದ್ದಾರೆ.

1 ಮಿಲಿಯನ್ ಡಾಲರ್ ಅವಾರ್ಡ್ ಗೆದ್ದ ಶಿಕ್ಷಕನಿಂದ ಈಗ ನೀರಿನ ರಕ್ಷಣೆ‌ ಕುರಿತು ಪಾಠ

ಇದಕ್ಕೆ ಅನೇಕರು ಫನ್ನಿ ಕಮೆಂಟ್ ಗಳನ್ನು ಮಾಡಿದ್ದು, ಆಗಲಿ, ಇದು ಎಂದಿಗೂ ನಿಜಕ್ಕೂ ಅದ್ಭುತವಾದ ಸಂಗತಿ. ಆಕೆ ಚಾಕೊಲೇಟ್ ಮೊಟ್ಟೆಗಳನ್ನು ಕಾಪಾಡಿಕೊಳ್ಳುತ್ತಿದ್ದಾಳೆ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ.

ಆಕೆ ಕ್ಯಾಡ್ಬರಿಯನ್ನೇ ಇಡುತ್ತಿದ್ದಾಳೆಯೇ ಎಂದು ಒಂದು ಕಮೆಂಟ್ ಮಾಡಿದ್ದರೆ, ತನ್ನ ಮಕ್ಕಳಿಗಾಗಿ ಚಾಕೊಲೇಟ್ ಮೊಟ್ಟೆಗಳಿವು ಎಂದುಕೊಂಡಿದೆಯೋ ಏನೋ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...