alex Certify ಲೈವ್​ ಸ್ಟ್ರೀಮ್​​ನಲ್ಲಿ ನಿದ್ದೆ ಮಾಡಿ ಹಣ ಗಳಿಸಿದ ಯುವತಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲೈವ್​ ಸ್ಟ್ರೀಮ್​​ನಲ್ಲಿ ನಿದ್ದೆ ಮಾಡಿ ಹಣ ಗಳಿಸಿದ ಯುವತಿ..!

ನಿದ್ದೆ ಮಾಡೋದು ಅಂದ್ರೆ ಇಷ್ಟವಲ್ಲದ ಕೆಲಸ ಎಂದು ಹೇಳೋರು ಯಾರಿದ್ದಾರೆ ಹೇಳಿ..? ಸಾಮಾನ್ಯವಾಗಿ ಎಲ್ಲರೂ ನಿದ್ದೆ ಮಾಡೋಕೆ ಬಯಸುತ್ತಾರೆ. ಆದರೆ ಥೈವಾನ್​​ನ ಸೋಶಿಯಲ್​ ಮೀಡಿಯಾದ ಪ್ರಭಾವಶಾಲಿ ಯುವತಿಯೊಬ್ಬರು ನಿದ್ದೆ ಮಾಡುವ ಮೂಲಕ ಹಣ ಗಳಿಸಿದ್ದಾರೆ .

ಕ್ಯಾಮರಾ ಆನ್​ ಇದ್ದಾಗಲೇ ತೈವಾನ್​​ನ ಯುವತಿ ಅಕಸ್ಮಾತ್​ ಆಗಿ ನಿದ್ದೆಗೆ ಜಾರಿದ್ದಾಳೆ. ಆದರೆ ಆಶ್ಚರ್ಯಕರ ವಿಚಾರ ಅಂದ್ರೆ ಈಕೆ ಈ ನಿದ್ದೆ ಮಾಡಿದ ವಿಡಿಯೋದಿಂದಾಗಿ 5249 ರೂಪಾಯಿಗಳನ್ನ ಗಳಿಸಿದ್ದಾಳೆ.

ಶಿಕ್ಷಕಿಗೆ ಉಚ್ಚರಿಸಲು ಕಷ್ಟವೆಂದು ವಿದ್ಯಾರ್ಥಿನಿಯ ಹೆಸರನ್ನೇ ಬದಲಿಸಿದ ಶಾಲೆ….!

ಮಲೇಷಿಯಾದ AMOi-AMOi ಸಂಘದ ಮಾಜಿ ಸದಸ್ಯೆಯಾಗಿದ್ದ ಈಕೆ ಸೋಶಿಯಲ್​ ಮೀಡಿಯಾದಲ್ಲಿ ತನ್ನದೇ ಸ್ವಂತ ಚಾನೆಲ್​ವೊಂದನ್ನ ಹೊಂದಿದ್ದಳು. ಈ ಚಾನೆಲ್​​ನಲ್ಲಿ ಆಕೆ ತಾನು ಮಾಡಿಕೊಂಡ ಕಾಸ್ಮೆಟಿಕ್​ ಸರ್ಜರಿಗಳ ಬಗ್ಗೆ ಮಾಹಿತಿ ನೀಡುತ್ತಿದ್ದಳು. ಈಕೆ ಸೋಶಿಯಲ್​ ಮೀಡಿಯಾದಲ್ಲಿ ಫಾಲೋವರ್ಸ್​ನ್ನೂ ಹೊಂದಿದ್ದಳು.

ಆದರೆ ಲೈವ್​ ಸ್ಟ್ರೀಮ್​ ವೇಳೆ ಈಕೆ ಅಕಸ್ಮಾತ್​ ಆಗಿ ನಿದ್ದೆ ಹೋಗಿದ್ದರೂ ಸಹ 11 ಸಾವಿರ ಮಂದಿ ಈಕೆ ನಿದ್ರಿಸುತ್ತಿರುವ ವಿಡಿಯೋವನ್ನೇ ನೋಡಿದ್ದಾರಂತೆ. ಈ ಹಿಂದಿನ ಎಲ್ಲಾ ವಿಡಿಯೋಗಳಿಗಿಂತ ಈ ನಿದ್ದೆಯ ವಿಡಿಯೋ ಈಕೆಗೆ ಅಧಿಕ ಆದಾಯ ತಂದುಕೊಟ್ಟಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...